Coastal Bulletin

ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಜಾರಿಗೆ ತಂದಿರುವುದರಿಂದ ರಾಜ್ಯದ ಪ್ರತಿಯೊಬ್ಬ ಮಹಿಳೆಯು ಉಚಿತ ಪ್ರಯಾಣವನ್ನು ಇಷ್ಟಪಡುತ್ತಿದ್ದರು, ಅದರಲ್ಲೂ ವಿಕೇಂಡ್‌ನಲ್ಲಿ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರದ್ದೇ ದರ್ಬಾರ್ ಆಗಿಬಿಟ್ಟಿದೆ. ಇದರಿಂದ ಪ್ರತಿ ವಿಕೇಂಡ್‌ನಲ್ಲಿ ಉಚಿತ ಪ್ರಯಾಣಕ್ಕೆ ಹೊಸ ರೂಲ್ಸ್ ತರಲು ರಾಜ್ಯ ಸರ್ಕಾರ ಚಿಂತನೆಯನ್ನು ಮಾಡಿದೆ.

ಶಕ್ತಿ ಯೋಜನೆಯಲ್ಲಿ ಕೆಲ ಬದಲಾವಣೆಯನ್ನು ಮಾಡಲು ಸರ್ಕಾರ ಗಂಭೀರ ಚಿಂತನೆಯನ್ನು ನಡೆಸುತ್ತಿದೆ. ಪ್ರತಿ ವೀಕೆಂಡ್‌ನಲ್ಲಿಯೂ ನಾಲ್ಕು ಸಾರಿಗೆ ಬಸ್‌ಗಳಲ್ಲಿ ಒತ್ತಡ ಹೆಚ್ಚಿದ್ದು, ಹೀಗಾಗಿ ವೀಕೆಂಡ್‌ನಲ್ಲಿ ಮಹಿಳೆಯರ

ಓಡಾಟಕ್ಕೆ ಶೀಘ್ರದಲ್ಲೇ ಲಗಾಮು ಬೀಳಲಿದೆ. 

ಈ ತಿಂಗಳಾಂತ್ಯದೊಳಗೆ ಶಕ್ತಿ ಯೋಜನೆಗೆ ಹೊಸ ರೂಲ್ಸ್ ಬರಲಿದ್ದು, ಶಕ್ತಿ ಯೋಜನೆಯಲ್ಲಿ ರೂಲ್ಸ್ ಮಾರ್ಪಾಡು ಗೆ ಸಾರಿಗೆ ನಿಗಮಗಳಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. 


Leave a Comment