ಕೇರಳದ ಕೋಯೊಕ್ಕೋಟ್ ಪ್ಯಾರಾಗಾನ್ ರೆಸ್ಟೋರೆಂಟ್ ಮತ್ತು ಇಲ್ಲಿನ ಬಿರಿಯಾನಿ ಜಗತ್ತಿನ ಪ್ರಮುಖ 150 ರೆಸ್ಟೋರೆಂಟ್ ಪಟ್ಟಿಗಳಲ್ಲಿ 11 ನೇ ಸ್ಥಾನ ಪಡೆದಿದೆ. ಅಲ್ಲದೇ ಇಲ್ಲಿ ದೊರೆಯುವ ಬಿರಿಯಾನಿಗೂ 11 ನೇ ಸ್ಥಾನ ಪಡೆದು ಮತ್ತಷ್ಟು ಮಹತ್ತರ ಸ್ಥಾನವನ್ನು ಪಡೆದುಕೊಂಡಿದೆ.
ಜೂನ್ 23ರ ಶುಕ್ರವಾರದಂದು ಕ್ರೊಯೇಷಿಯಾ ಮೂಲದ ಆನ್ಲೆö Ê ನ್ ಟ್ರಾವೆಲ್ ಗೈಡ್ ಸಂಸ್ಥೆಯಾಗಿರುವ ಟೇಸ್ಟ್ ಅಟ್ಲಾಸ್ ಪಟ್ಟಿಯಲ್ಲಿ ಜಗತ್ತಿನ ಪ್ರಮುಖ ರೆಸ್ಟೋರೆಂಟ್ ಮತ್ತು ಅಲ್ಲಿ ಸಿಗುವ ಖಾದ್ಯಗಳನ್ನು ಗುಣಮಟ್ಟ, ರುಚಿ
ಆಧಾರ ಮೇಲೆ ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ವಿಯೆನ್ನಾದ ಫಿಗ್ಲ÷್ಶಲ್ಲರ್ ರೆಸ್ಟೋರೆಂಟ್ ಆಗ್ರಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿ ಸಿಗುವ ಶ್ನಿಟ್ಜೆಲ್ ವೀನರ್ ಅರ್ಟ್ ಜಗತ್ತಿನ ಅತ್ಯಂತ ರುಚಿಕರ ಆಹಾರ ಎಂದು ಸಂಸ್ಥೆ ಹೇಳಿದೆ.















