Coastal Bulletin

ಮುಂಬರುವ ವರ್ಷಗಳಲ್ಲಿ ಎಲ್ಲ ರಾಜ್ಯಗಳಲ್ಲಿ ವೆಂಕಟೇಶ್ವರ ದೇವಾಲಯಗಳನ್ನು ಸ್ಥಾಪಿಸಲು ವಿಶ್ವದ ಶ್ರೀಮಂತ ದೇವಾಲಯ ಟ್ರಸ್ಟ್ ಎಂದು ಪರಿಗಣಿಸಲ್ಪಟ್ಟಿರುವ ತಿರುಮಲ ತಿರುಪತಿ ದೇವಸ್ಥಾನದ ಟ್ರಸ್ಟ್ ನಿರ್ಧರಿಸಿದೆ.

ಇದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಮಲ ತಿರುಪತಿ ದೇವಸ್ಥಾನಮ್‌ಯ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿದೆ. ಭಾರತದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ತಿರುಪತಿ ದೇವಸ್ಥಾನದ ಕನಿಷ್ಠ ಒಂದು ಪ್ರತಿಕೃತಿ ದೇಗುಲ ನಿರ್ಮಿಸುವ ಮೂಲಕ ದೇಶಾದ್ಯಂತ ಬಾಲಾಜಿ ದೇವರ

ಉಪಸ್ಥಿತಿಯನ್ನು ಖಚಿತಪಡಿಸಲು ಮುಂದಾಗಿದೆ. 

ಪ್ರಸ್ತುತ., ಜಮ್ಮು, ನವಿ ಮುಂಬೈ, ಗುಜರಾತ್ ಮತ್ತು ಛತ್ತಿಸ್‌ಗಢದಂತಹ ದೇಶಾದ್ಯಂತ ಹಲವಾರು ಸ್ಥಳಗಳಲ್ಲಿ ವೆಂಕಟೇಶ್ವರ ದೇವಾಲಯದ ಪ್ರತಿಕೃತಿಗಳನ್ನು ನಿರ್ಮಿಲಾಗುತ್ತಿದೆ. ಓಟಿಡಿ ಟ್ರಸ್ಟ್ ಗುಜರಾತ್‌ನ ಗಾಂಧಿನಗರ, ಛತ್ತೀಸ್‌ಗಢದ ರಾಯ್‌ಪುರ ಮತ್ತು ಬಿಹಾರದಲ್ಲಿ ದೇವಾಲಯಗಳನ್ನು ನಿರ್ಮಿಸಲು ಪರಿಗಣಿಸುತ್ತಿದೆ. 


Leave a Comment