Coastal Bulletin

ತರಕಾರಿ ಬೆಲೆ ಹೆಚ್ಚಳದಿಂದ ಕಂಗಲಾಗಿರುವ ಜನರಿಗೆ ಈಗ ಅಕ್ಕಿ ಬೆಲೆ ಹೆಚ್ಚಳದಿಂದ ಕಸಿವಿಸಿ ಉಂಟಾಗಿದೆ. ವಸ್ತುಗಳಿಗೂ ಇದೇ ರೀತಿ ಹೆಚ್ಚಳವಾದರೆ ಉಪವಾಸ ಕುರುವುದು ಒಂದೇ ಬಾಕಿ. ಖಾದ್ಯ ತೈಲ ಬೆಲೆ ಇಳಿಕೆಯಿಂದ ಕೊಂಚ ನಿಟ್ಟುಸಿರು ಇಡುತ್ತಿದ್ದ ಜನರನ್ನು ಈಗ ಅಕ್ಕಿ, ಬೇಳೆಕಾಳುಗಳ ಬೆಲೆ ಏರಿಕೆ ಕಂಗಾಲಾಗುವಂತೆ ಮಾಡಿದೆ.

ಬೇಳೆಕಾಳು ಬೆಲೆ ಹದಿನೈದು ದಿನಗಳಿಂದ ದಿಡೀರ್ ಏರಿದ್ದರೆ, ಅಕ್ಕಿ 2 ರೂನಿಂದ ಆರಂಭವಾಗಿ ಈಗ ಸುಮಾರು 10-20 ರೂವರೆಗೆ ಹೆಚ್ಚಳವಾಗಿದೆ. ಒಂದು ತಿಂಗಳ ಅಂತರದಲ್ಲಿ ಬೇಳೆಕಾಳುಗಳ ಬೆಲೆ 20-30

ರವರೆಗೂ ಏರಿಕೆಯಾಗಿದೆ. 

ಏರಿಕೆಯಾಗುತ್ತಿರುವ ಅಕ್ಕಿ, ಬೇಳೆಕಾಳುಗಳ ಬೆಲೆ ಸದ್ಯಕ್ಕೆ ಇಳಿಕೆಯಾಗುವ ಲಕ್ಷಣಗಳಿಲ್ಲ. ಮುಂದಿನ ನಾಲ್ಕು ತಿಂಗಳವರೆಗೂ ಬೆಲೆ ಏರಿಕೆ ಮುಂದುವರಿಯಬಹುದು ಅಥವಾ ತುಸು ಹೆಚ್ಚು ಕಡಿಮೆಯಾಗಬಹುದೆಂಬ ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. 


Leave a Comment