Coastal Bulletin

ಬಂಟ್ವಾಳ: ಕೃಷಿ ಭೂಮಿಯಲ್ಲಿ ಹಾದು ಹೋಗುವ ಉಡುಪಿ - ಕಾಸರಗೋಡು ನಡುವಿನ ೪೦೦ ಕೆ.ವಿ. ವಿದ್ಯುತ್ ಪ್ರಸರಣ ತಂತಿ ಅಳವಡಿಸುವುದನ್ನು ನಿಲ್ಲಿಸಬೇಕೆಂದು‌ ಆಗ್ರಹಿಸಿ ಕಾಂಗ್ರೆಸ್ ಮತ್ತು ಸಂತ್ರಸ್ತ ರೈತರು ಬಿ.ಸಿ.ರೋಡಿನಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಸಭೆ ನಡೆಸಿದರು.

ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ  ಮಾತನಾಡಿ, ಜಿಲ್ಲೆಯ ರೈತರು‌ ಅಡಿಕೆ ,ತೆಂಗು ಇನ್ನಿತರ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆ ಕೃಷಿ‌ ಭೂಮಿಯಲ್ಲಿ ವಿದ್ಯುತ್ ತಂತಿ ಹಾದು ಹೋದರೆ ರೈತರ ಜೀವನ ನಾಶವಾಗುದರ ಜೊತೆಗೆ , ಜೀವರಾಶಿಗಳಿಗೂ ಹಾನಿ ಉಂಟಾಗುತ್ತದೆ . ಇದರ ವಿರುದ್ಧ ಧ್ವನಿ ಎತ್ತಲೇ ಬೇಕು ಎಂದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ,  ನಾವು ಜಿಲ್ಲೆಯ ಅಭಿವೃದ್ಧಿಯ ವಿರೋಧಿಯಲ್ಲ,ಆದರೆ ರೈತರಿಗೆ‌ ಆಗುವ ಅನ್ಯಾಯ‌ವನ್ನು ಸಹಿಸಿಕೊಂಡು ಇರುವವರು ಕೂಡ‌ ನಾವಲ್ಲ ಎಂದರು.

ಸಂತ್ರಸ್ತೆ ಕಾನ್ಸೆಪ್ಟ್ ಡೇಸಾ,   ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್ .ರೊಡ್ರಿಗಸ್ ಮಾತನಾಡಿದರು.  ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ ಎಂ.ಎಸ್. ಮಹಮ್ಮದ್, ಬಿ.ಪದ್ಮಶೇಖರ್ ಜೈನ್, ಸುದರ್ಶನ್

ಜೈನ್, ವೀಣಾ ಭಟ್, ರಾಯ್ ಕಾರ್ಲೋ, ಮಹಮದ್ ಶಫಿ, ಲುಕ್‌ಮಾನ್, ಚಿತ್ತರಂಜನ್ ಶೆಟ್ಟಿ, ರೋಷನ್ ರೈ, ಮೋಹನ್ ಗೌಡ ಕಲ್ಮಂಜ, ಶೇಖರ್ ಬಿ,,  ರಾಮಣ್ಣ ವಿಟ್ಲ, ಪ್ರಭಾಕರ ದೈವಗುಡ್ಡೆ ಪರಮೇಶ್ವರ ಮೂಲ್ಯ, ವಾಸು ಪೂಜಾರಿ, ಲವಿನಾ ವಿಲ್ಮಾ ಮೊರಾಸ್, ಕೆ.ಪದ್ಮನಾಭ ರೈ, ಪ್ರಕಾಶ್ ಶೆಟ್ಟಿ, ಜಗದೀಶ್ ಕೊಯಿಲಾ, ಪ್ರಶಾಂತ್ ಕುಲಾಲ್, ಸುರೇಶ್ ಜೋರಾ, ಯೂಸುಫ್ ಕರಂದಾಡಿ, ಆನಂದ ಸಾಲ್ಯಾನ್, ಅಬ್ಬಾಸ್ ಅಲಿ, ಜನಾರ್ದನ ಚೆಂಡ್ತಿಮಾರ್, ರಮೇಶ್ ನಾಯಕ್, ವೆಂಕಪ್ಪ ಪೂಜಾರಿ, ಪ್ರೇಮನಾಥ ಶೆಟ್ಟಿ, ಹಸೈನಾರ್, ಮಧುಸೂದನ್ ಶೆಣೈ, ಐಡಾ ಸುರೇಶ್, ಪ್ಲೋಸಿ ಡಿಸೋಜಾ, ಬೆನೆಡಿಕ್ಟ್ ಕಾರ್ಲೋ, ಸೀತಾರಾಮ ಶೆಟ್ಟಿ, ನವಾಝ್ ಬಂಟ್ವಾಳ, ಇಬ್ರಾಹಿಂ ನವಾಝ್, ಶರೀಫ್ ಪರ್ಲಿಯ, ಲೋಕೇಶ್ ಸುವರ್ಣ,  ಸುರೇಶ್ ಕುಮಾರ್ ಬಂಟ್ವಾಳ ಉಪಸ್ಥಿತರಿದ್ದರು. ಆರಂಭದಲ್ಲಿ ಪ್ರತಿಭಟನಾಕಾರರು ಬೈಕ್ ರ್‍ಯಾಲಿ ನಡೆಸುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

Leave a Comment