ಆಫ್ರಿಕನ್ ಹಂದಿ ಜ್ವರ: ಕೇರಳ ಗಡಿಯಲ್ಲಿ ತಪಾಸಣೆ

Coastal Bulletin
ಆಫ್ರಿಕನ್ ಹಂದಿ ಜ್ವರ: ಕೇರಳ ಗಡಿಯಲ್ಲಿ ತಪಾಸಣೆ

ಕೇರಳದಲ್ಲಿ ಮಾರಣಾಂತಿಕ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದ್ದು, ಈ ಬೆಳವಣಿಗೆ ರಾಜ್ಯದಲ್ಲೂ ಆತಂಕ ಸೃಷ್ಟಿಸಿದೆ. ಇದರಿಂದ ಮುನ್ನೆಚ್ಚರಿಕ ಕ್ರಮವಾಗಿ ಕೇರಳದಿಂದ ರಾಜ್ಯಕ್ಕೆ ಪ್ರಾಣಿಗಳ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ.

ಆಫ್ರಿಕನ್ ಹಂದಿಜ್ವರ ಹಂದಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ, ರೋಗ ಕಾಣಿಸಿಕೊಂಡ ಹಂದಿಗಳಲ್ಲಿ ಕೆಂಪು ಮೂಗು, ಮುಖದ ಮೇಲೆ ಮೊಡವೆಗಳು ಮತ್ತು ತೀವ್ರ ಜ್ವರಗಳು ಕಾಣಿಸಿಕೊಳ್ಳುತ್ತದೆ. ಮಾತ್ರವಲ್ಲ ಈ ಹಂದಿ ಜ್ವರವೂ ಹೆಚ್ಚಾಗಿ

ಹರಡದಂತೆ, ಆದರಲ್ಲೂ ರಾಜ್ಯದಲ್ಲಿ ಹರಡದಂತೆ ಗಡಿಯಲ್ಲಿರುವ ಜನರು ಸಹಕಾರಿಸಬೇಕು. ಈಗಾಗಲೇ ಜಾನುವಾರುಗಳ ರಕ್ಷಣೆಗೆ ಮುಂಜಾಗ್ರತಾ ಕ್ರಮವಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕಲು ಇಲಾಖೆ ನಿರ್ಧರಿಸಿದೆ ಎಂದು ಪಶುವೈದ್ಯ ಅಧಿಕಾರಿಗಳು ತಿಳಿಸಿದ್ದಾರೆ. 


Leave a Comment