ತುಳುನಾಡು ತನ್ನ ಶ್ರೀಮಂತ ಆಚರಣೆ ಮತ್ತು ಸಂಸ್ಕ್ರತಿಗೆ ಹೆಸರಾದ ಬೀಡು. ಇಲ್ಲಿ ಪ್ರತಿಯೊಂದು ಆಚರಣೆಯನ್ನು ಕೂಡಾ ಶಿಸ್ತುಬದ್ಧವಾಗಿ ಪಾಲಿಸಲಾಗುತ್ತದೆ. ಪ್ರತಿಯೊಂದು ಮಾಸದಲ್ಲೂ ಬರುವ ಹಬ್ಬ ಹರಿದಿನಗಳನ್ನು ಬಳಹ ಶ್ರದ್ಧೆಯಿಂದ ಆಚರಿಸುತ್ತಾರೆ. ಆದರಂತೆ ಇಂದಿನಿಂದ ತುಳುವರಿಗೆ ಆಟಿ ತಿಂಗಳು ಆರಂಭ.
ಆಟಿ ತಿಂಗಳಿನ ಆಟಿ ಅಮವಾಸ್ಯೆಯ ದಿನ ಔಷಧೀಯ ಗುಣವಿರುವ ಹಾಲೆ ಮರದ ತೊಗಟಿಯ ಕಷಾಯ ಕುಡಿಯುವ ಪದ್ಧತಿಯು ಇದೆ. ಮಾತ್ರವಲ್ಲ ಇನ್ನು ಈ ತಿಂಗಳಿನಲ್ಲಿ ಹಲವು ಬಗೆಯ ತಿಂಡಿ ತಿನಿಸುಗಳು ಕೂಡ ಮಾಡುವ ತಿಂಗಳು ಎಂದರೆ ತಪ್ಪಗಲಾರದು. ಆದರಲ್ಲಿ ಮುಖ್ಯವಾದವುಗಳೆಂದರೆ ಪತ್ರೋಡೆ ಅಥವಾ ಕೆಸುವಿನ ಎಲೆ ಮಾಡುವುದು. ಈ ತಿಂಡಿ ಸಾಂಪ್ರದಾಯಿಕವಾಗಿಯು ವೈಜ್ಞಾನಿಕವಾಗಿಯೂ ತುಂಬ ಒಳ್ಳೆಯದು.
ಪತ್ರೋಡೆ (ಕೆಸುವಿನ) ಎಲೆಯಿಂದ ದೇಹಕ್ಕೆ ಸಿಗುವ ಪ್ರಯೋಜನಗಳು:
1. ಇದರ ಎಲೆಗಳು ಆಂಥೋಸಯಾನಿನ್‌ಗಳು ಮತ್ತು ಲುಟಿಯೋಲಿನ್‌ಗಳನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೆ, ಕ್ಯಾಲ್ಸಿಯಂ ಆಕ್ಸಲೇಟ್, ಪಿಷ್ಟ, ಖನಿಜಗಳು (ಕ್ಯಾಲ್ಸಿಯಂ ರಂಜಕ, ಇತ್ಯಾದಿ) ಫೈಬರ್‌ಗಳು ಮತ್ತು ವಿಟಮಿನ್ ಎ,ಬಿ ಮತ್ತು ಸಿ, ಇತರ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ.
2. ಪತ್ರೋಡೆ ಎಲೆಗಳೂ ದೃಷ್ಟಿಯನ್ನು ಬೆಂಬಲಿಸುವ ವಿಟಮಿನ್ ಎ ಯ ಉತ್ತಮ ಮೂಲವಾಗಿದೆ.
3. ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ ಮತ್ತು ಮೆಗ್ನೀಸಿಯಮ್ ಮುಂತಾದ ಪ್ರಮುಖ ಖನಿಜಗಳು ಪತ್ರೋಡೆ ಎಲೆಯಲ್ಲಿ ಕಂಡು ಬರುತ್ತದೆ.
4. ಗಿಡಗಳಲ್ಲಿರುವ ಬೇರುಗಳು ಹೆಚ್ಚಿನ ಫೈಬರ್ ಮತ್ತು ಪಿಷ್ಟ-ನಿರೋಧಕವನ್ನು ಹೊಂದಿರುವುದರಿಂದ, ಅವು ಮಲಬದ್ಧತೆಗೆ ಬಹಳ ಸಹಾಯಕವಾಗಿದೆ.
5.
style="white-space:pre">
6. ಇದು ಆಯಾಸವನ್ನು ಕಡಿಮೆ ಮಾಡುತ್ತದೆ, ಕ್ಯಾನ್ಸರ್ ತಡೆಗಟ್ಟುವಿಕೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಳ, ರಕ್ತ ಪರಿಚಲನೆ ಸುಧಾರಣೆ ಅತ್ಯುತ್ತಮ ಚರ್ಮದ ಆರೋಗ್ಯಕ್ಕೆ ಸಹಕಾರಿ.
7. ಎಲೆಗಳನ್ನು ಕುದಿಸುವುದರಿಂದ ಬೇಯಿಸಿದ ಅಂಗಾಂಶದಲ್ಲಿ ಆಕ್ಸಲೇಟ್ ಪ್ರಮಾಣವನ್ನು ಕಡಿಮೆ ಮಾಡಬಹುದು.
ಆದರೆ ಪತ್ರೋಡೆ ಎಲೆಗಳ ಕಚ್ಚಾ ಸೇವನೆಯು ಅಪಾಯಕಾರಿಯಲ್ಲ ಆದರೆ ಜಗಿಯುವಾಗ ಅಥವಾ ಹಸಿಯಾಗಿ ತಿನ್ನುವಾಗ ತುಟಿಗಳು, ಬಾಯಿ ಮತ್ತು ನಾಲಿಗೆಯ ತ್ವರಿತ ಸುಡುವ ನೋವು ಮತ್ತು ಊತವನ್ನು ಉಂಟುಮಾಡಬಹುದು. ಯಾರಾದರೂ ಇದರ ಎಲೆಯನ್ನು ಸ್ಪರ್ಶಿಸಿದಾಗ ಅಥವಾ ಕಚ್ಚಾ ಸೇವಿಸಿದಾಗ, ಕ್ಯಾಲ್ಸಿಯಂ ಆಕ್ಸಲೇಟ್ ಹರಳುಗಳು ಇರುವುದರಿಂದ ತುರಿಕೆಯನ್ನು ಉಂಟುಮಾಡುತ್ತದೆ.
ಈ ಪತ್ರೋಡೆ ಎಲೆಯಿಂದ ಹಲವು ಶೈಲಿಯ ತಿಂಡಿಗಳನ್ನು ಮಾಡುತ್ತಾರೆ. ಹೇಗೆ ಮಾಡಿದರೂ ಈ ಎಲೆಯ ಸೇವನೆಯಿಂದ ಆರೋಗ್ಯಕೆ ತುಂಬಾ ಉಪಯೋಗಗಳು ಇದೆ. ಹಿಂದಿನ ಕಾಲದಲ್ಲಿ ಪೂರ್ವಜರು ಆರೋಗ್ಯಕರವಾದ ತಿಂಡಿಗಳನ್ನು ಮಾಡುತ್ತಿದ್ದರು ಎನ್ನುವುದಕ್ಕೆ ಇದೇ ಸಾಕ್ಚಿ ಎನ್ನಬಹುದು.















