ಕಾಸರಗೋಡು: ಜಿಲ್ಲಾ ಕುಲಾಲ ಸಂಘ(ರಿ) ಮಂಜೇಶ್ವರ ಇದರ ಹೊಸಬೆಟ್ಟು ಮಂಜೇಶ್ವರದಲ್ಲಿ ನಿರ್ಮಿಸಲಾಗಿದ್ದ ಕುಲಾಲ ಸಮಾಜ ಮಂದಿರವು ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಮಯದಲ್ಲಿ ಸರಕಾರದ ವಶಕ್ಕೆ ಸೇರಿಹೋಗಿದ್ದು, ಇದೀಗ ಸಂಘಕ್ಕೆ ಹೊಸ ಭವನವನ್ನು ನಿರ್ಮಿಸುವ ಸಲುವಾಗಿ ಕುಂಜತ್ತೂರು ತೂಮಿನಾಡಿನಲ್ಲಿ ಖರೀದಿಸಿದ ಸ್ಥಳದಲ್ಲಿ ಜು.16ರಂದು ಭಾನುವಾರ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಜರಗಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಶ್ರೀ ರವೀಂದ್ರ ಮುನ್ನಿಪ್ಪಾಡಿ, ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಣ,ಆರೋಗ್ಯ, ಧಾರ್ಮಿಕ ಸದೃಢತೆ ಅವಶ್ಯವಾಗಿ ನಮ್ಮಸಮಾಜಕ್ಕೆ ಬೇಕು ಈ ನೆಲೆಯಲ್ಲಿ ಸಮಾಜ ಬಾಂಧವರು ಒಟ್ಟಾಗಲು ಇಂತಹ ಸಮಾಜ ಮಂದಿರ ನೆರಳಾಗಿದೆ ಎಂದು ಕಾರ್ಯಕ್ರಮ ನನ್ನು ಉದ್ಘಾಟಿಸಿದ ಶ್ರೀ ಪುರುಷೋತ್ತಮ ಕಲ್ಬಾವಿ.ಮಂಗಳೂರು ಹೇಳಿ ,ಕುಲಾಲರ ಕನಸು ಶೀಘ್ರದಲ್ಲೇ ನೆರವೇರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ.ಕೆ.ಎಂ.ಅಶ್ರಫ್ ರವರು ವಿಜ್ಞಾಪನ ಪತ್ರ ಬಿಡುಗಡೆ ಗೊಳಿಸಿ,ದೇಶದ ಅಭಿವೃದ್ಧಿಯ ಸಲುವಾಗಿ ಕಟ್ಟಡವನ್ನು ಬಿಟ್ಟುಕೊಟ್ಟ ಕುಲಾಲರಿಗೆ ಅಭಿನಂದನೆಗಳನ್ನು ಸಲ್ಲಿಸಿದರು., ಭಾರತದಲ್ಲಿ ಹುಟ್ಟಿ ಸಾಯುವುದೆಂದರೆ ಅದು ನಮ್ಮ ಪುಣ್ಯ,ಭಾರತ ಸಾಮರಸ್ಯದ ಬೀಡು, ಕುಲಾಲ್ ಸಮುದಾಯದ ಜತೆ ವೈಯಕ್ತಿಕವಾಗಿ ನಾನೂ ಇದ್ದೇನೆ. ನಿಮ್ಮ ಕನಸು ಬೇಗನೆ ನನಸಾಗಲಿ ಎಂದು ಶುಭಹಾರೈಸಿದರು.
ಮಂಜೇಶ್ವರ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಿ,ಲೆವಿನಾ ಮಂತೆರೋ,
ಕಾಸರಗೋಡು ಜಿಲ್ಲಾಪಂಚಾಯತ್ ಸದಸ್ಯರಾದ ಶ್ರೀಮತಿ ಕಮಲಾಕ್ಷಿ.ವಿ.ಕುಲಾಲ್, ವರ್ಕಾಡಿ,ಶ್ರೀಯುತ ಮಯೂರ್ ಉಳ್ಳಾಲ್,ಶ್ರೀ ಕೃಷ್ಣ ಶಿವಕೃಪಾ,ಶ್ರೀ ಮೋಹನ ಶೆಟ್ಟಿ ತೂಮಿನಾಡು,ಶ್ರೀ ಕಮಲಾಕ್ಷ.ತೂಮಿನಾಡು, ಶ್ರೀಮತಿ ಜಯಂತಿ ಬದಿಯಡ್ಕ, ಶ್ರೀ ಯಾದವ ಬಡಾಜೆ,ಶ್ರೀ ಪ್ರಕಾಶ್ ಕುಲಾಲ್ ಬದಿಯಡ್ಕ, ಶ್ರೀಮತಿ ಸೀತಾ ಕುಲಾಲ್ ತಚ್ಚಣಿ,ಶ್ರೀ ಸೀತಾರಾಮ ಬಂಗೇರ ಕೊಲ್ಯ,ಶ್ರೀ ಪ್ರೇಮಾನಂದ ಕುಲಾಲ್ ಮಂಗಳೂರು,ಶ್ರೀ ದಾಮೋದರ ಕುಲಾಲ್.ಮಂಗಳೂರು,ಶ್ರೀ ಬಾಬು ಮೂಲ್ಯ ಪೈವಳಿಕೆ ಶ್ರೀಮತಿ ಸ್ವಪ್ನಾ ಗಣೇಶ್,ಶ್ರೀ ಗೋಪಾಲ ಸಾಲಿಯಾನ್ ಕಣ್ವತೀರ್ಥ, ಶ್ರೀಮತಿ ಗಿರಿಜಾ,ಎಸ್,ಬಂಗೇರ, ಶ್ರೀಮತಿ ಮಾಲತಿ ಪಾವೂರು ಮುಂತಾದ ಗಣ್ಯರು ಅತಿಥಿಗಳಾಗಿ ವೇದಿಕೆಯಲ್ಲಿ ಶುಭಹಾರೈಸಿದರು.
ಶ್ರೀ ರಾಧಾಕೃಷ್ಣ ಆಚಾರ್ಯ ಕುಂಜತ್ತೂರು ಇವರ ಪೌರೋಹಿತ್ಯದಲ್ಲಿ ಶಿಲಾನ್ಯಾಸ ನೆರವೇರಿಸಿ ಶ್ರೀ ರವೀಂದ್ರ ಮುನ್ನಿಪ್ಪಾಡಿ ಸ್ವಾಗತಿಸಿದರು, ಕಣ್ವತೀರ್ಥದ ಕುಲಾಲ ಬಾಲ ಬಾಲಕಿಯರು ಪ್ರಾರ್ಥನೆ ಗೈದರು, ಕಾರ್ಯಕ್ರಮವನ್ನು ಲೇಖಕರಾದ ಶ್ರೀ ರವೀಂದ್ರ ಕುಲಾಲ್ ವರ್ಕಾಡಿ ನಿರೂಪಿಸಿ, ದಾಮೋದರ ಮಾಸ್ಟರ್ ತಲೆಕಲ ವಂದನಾರ್ಪಣೆ ಗೈದರು,ಸಹಭೋಜನದ ನಂತರ ಸಂಘದ ಮಹಾಸಭೆಯು ಸಂಪನ್ನಗೊಂಡಿತು
















