ಕಡೇಶಿವಾಲಯ: ಆಧಾರ್ ತಿದ್ದುಪಡಿ ಅಭಿಯಾನ ಹಾಗೂ ಅಂಚೆ ಇಲಾಖೆ ಸೌಲಭ್ಯಗಳ ಮಾಹಿತಿ ಕಾರ್ಯಗಾರ.

Coastal Bulletin
ಕಡೇಶಿವಾಲಯ: ಆಧಾರ್ ತಿದ್ದುಪಡಿ ಅಭಿಯಾನ ಹಾಗೂ ಅಂಚೆ ಇಲಾಖೆ ಸೌಲಭ್ಯಗಳ ಮಾಹಿತಿ ಕಾರ್ಯಗಾರ.

ಬಂಟ್ವಾಳ: ತಾಲೂಕಿನ ಕಡೇಶಿವಾಲಯ ಗ್ರಾಮದ ಬಿರುವೆರು ಕಡೇಶಿವಾಲಯ ಸೇವಾ ಟ್ರಸ್ಟ್ (ರಿ.) ಹಾಗೂ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಯೋಗದೊಂದಿಗೆ ರೋಟರಿ ಸಮುದಾಯ ದಳ ಕಡೇಶಿವಾಲಯ ಇಲ್ಲಿ ಗ್ರಾಮದ ಸಾರ್ವಜನಿಕ ಬಂಧುಗಳಿಗಾಗಿ "ಆಧಾರ್ ತಿದ್ದುಪಡಿ ಅಭಿಯಾನ" ಕಾರ್ಯಕ್ರಮ ನಡೆಯಿತು‌.

ಪುತ್ತೂರು ವಿಭಾಗದ ಅಂಚೆ ಇಲಾಖೆಯ ಅಧಿಕಾರಿ ನೂತನ್ ಬಂಗೇರ, ಮತ್ತು ಟ್ರಸ್ಟಿನ ಟ್ರಸ್ಟಿಗಳು ದೀಪ ಪ್ರಜ್ವಲನೆಗೈದು, ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪುತ್ತೂರ್ ಅಂಚೆ ಇಲಾಖೆಯ ನೂತನ್ ಬಂಗೇರ್ ಅಂಚೆ ಇಲಾಖೆಯ ಸೌಲಭ್ಯಗಳ ಬಗ್ಗೆ ಹಾಗೂ ವೈಯಕ್ತಿಕ ವಿಮಾ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದರು.

ಈ ಸಂಧರ್ಭ ಗ್ರಾಮದ ಸುಮಾರು 150ಕ್ಕೂ ಹೆಚ್ಚು ಜನ ಆಧಾರ್ ತಿದ್ದುಪಡಿ ಮಾಡಿಸಿಕೊಂಡರು,

ಸುಮಾರು 40 ಜನ ಆಧಾರ್ ಸೀಡಿಂಗ್ ಮಾಡಿಸಿಕೊಂಡರು, 60 ಜನರು ಪರ್ಸನಲ್ ಆಕ್ಸಿಡೆಂಟಲ್ ಇನ್ಸೂರೆನ್ಸ್ ಪಾಲಿಸಿ ಮಾಡಿಸಿಕೊಂಡರು.

ಕಡೇಶಿವಾಲಯ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಸುರೇಶ್ ಶೆಟ್ಟಿಗಾರ್ ಬನಾರಿ ಇವರು ಉಪಸ್ಥಿತರಿದ್ದು ಆಧಾರ್ ತಿದ್ದುಪಡಿಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ದೃಢೀಕರಣ ನೀಡುವಲ್ಲಿ ನೆರವಾದರು 

ಟ್ರಸ್ಟ್ ನ ಅಧ್ಯಕ್ಷರಾದ ದಿನೇಶ್ ಪೂಜಾರಿ ಸುರ್ಲಾಜೆ ಸ್ವಾಗತಿಸಿ, .ಟ್ರಸ್ಟ್ ನ ಸಂಚಾಲಕರಾದ ವಿದ್ಯಾಧರ ಪೂಜಾರಿ ಪೆರ್ಲಾಪು ವಂದಿಸಿದರು.ಕಾರ್ಯದರ್ಶಿ ಯಶವಂತ್ ಪತ್ತು ಕೊಡಂಗೆ, ಹಾಗೂ ಟ್ರಸ್ಟಿಗಳು ಸಹಕರಿಸಿದರು.

Leave a Comment