ಮಹೇಶ್ ಬಾಬು ಪುತ್ರಿ ಮೊದಲ ಆ್ಯಡ್‌ಶೂಟ್‌ನಲ್ಲಿ ಗಳಿಸಿದ ಸಂಭಾವನೆ ಎಷ್ಟು ಗೊತ್ತ? ಆ ಸಂಭಾವನೆಯನ್ನು ಏನು ಮಾಡಿದರು ಗೊತ್ತ?

Coastal Bulletin
ಮಹೇಶ್ ಬಾಬು ಪುತ್ರಿ ಮೊದಲ ಆ್ಯಡ್‌ಶೂಟ್‌ನಲ್ಲಿ ಗಳಿಸಿದ ಸಂಭಾವನೆ ಎಷ್ಟು ಗೊತ್ತ? ಆ ಸಂಭಾವನೆಯನ್ನು ಏನು ಮಾಡಿದರು ಗೊತ್ತ?

ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಪುತ್ರಿ ಸಿತಾರಾ ಅಮೆರಿಕಾದ ನ್ಯೂಯಾರ್ಕ್ ನ ಪ್ರತಿಷ್ಠಿತ ಟೈಮ್ಸ್ ಸ್ಟೇರ್ ನಲ್ಲಿ ರಾಯಭಾರಿ ಆಗಿ ಮಿಂಚಿದ್ದರು. ಈಕೆಗೆ ಈಗಿನ್ನೂ ೧೧ ವರ್ಷ ವಯಸ್ಸು, ಆದರೆ ನಾಯಕಿಯರನ್ನೇ ಮೀರಿಸುವ ಅಂದ ಈ ಹುಡುಗಿಯದ್ದಾಗಿದೆ. ಸಾಂಪ್ರದಾಯಿಕ ಉಡುಗೆಗಳಲ್ಲಿ ಫೋಟೋಶೂಟ್ ಮಾಡಿಸಿಕೊಂಡಿರುವ ಸಿತಾರಾ, ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಜ್ಯುವೆಲರಿ ಬ್ರ‍್ಯಾಂಡ್‌ಗೆ ರಾಯಬಾರಿಯಾಗಿ ಕಾಣಿಸಿಕೊಂಡ ಸಿತಾರಾ ಅವರು ಮೊದಲ ಸಂಭಾವನೆಯೇ ೧ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಂಭಾವನೆಯನ್ನು ಪಡೆದಿದ್ದರು. ಮಾತ್ರವಲ್ಲ

ಇವರು ಈ ಸಂಭಾವನೆಯನ್ನು ಚಾರಿಟಿ ಒಂದಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಈ ಚಿಕ್ಕ ವಯಸ್ಸಿನಲ್ಲೇ ಸಿತಾರಾ ಈ ರೀತಿಯ ಹೆಜ್ಜೆ ಇಟ್ಟಿರೋದು ಅಭಿಮಾನಿಗಳಿಗೆ ಖುಷಿಕೊಟ್ಟಿದೆ. 


Leave a Comment