15 ವರ್ಷಗಳಲ್ಲಿ 41.5 ಕೋಟಿ ಭಾರತೀಯರು ಬಡತನದಿಂದ ಹೊರಗೆ: ವಿಶ್ವಸಂಸ್ಥೆ ವರದಿ

Coastal Bulletin
15 ವರ್ಷಗಳಲ್ಲಿ 41.5 ಕೋಟಿ ಭಾರತೀಯರು ಬಡತನದಿಂದ ಹೊರಗೆ: ವಿಶ್ವಸಂಸ್ಥೆ ವರದಿ

15 ವರ್ಷಗಳಲ್ಲಿ ಭಾರತದಲ್ಲಿ 41.5 ಕೋಟಿ ಮಂದಿ ಬಡತನದಿಂದ ಹೊರಗೆ ಬಂದಿದ್ದಾರೆ. ಬಡತನ ನಿರ್ಮೂಲನೆ ವಿಚಾರದಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ವರದಿ ಬಿಡುಗಡೆ ಮಾಡಿದೆ.

ಕಳೆದ 15 ವರ್ಷಗಳಲ್ಲಿ ಭಾರತ ಸೇರಿದಂತೆ ವಿಶ್ವದ 25 ದೇಶಗಳು ತಮ್ಮ ಜಾಗತಿಕ ಎಮ್‌ಪಿಐ ಮೌಲ್ಯವನ್ನು ಯಶಸ್ವಿಯಾಗಿ ಅರ್ಧಕ್ಕೆ ಇಳಿಸಿವೆ. ಈ 25ದೇಶಗಳ ಪಟ್ಟಿಯಲ್ಲಿ ಚೀನಾ, ಕಾಂಬೋಡಿಯಾ, ಕಾಂಗೋ, ಹೊಂಡುರಸ್, ಇಂಡೋನೇಷ್ಯಾ, ಮೊರಕ್ಕೋ, ಸರ್ಬಿಯಾ ಹಾಗೂ ವಿಯೆಟ್ನಾಂ ಕೂಡ ಇದೆ. ಏಪ್ರಿಲ್‌ನಲ್ಲಿ 142.86 ಕೋಟಿ ಜನಸಂಖ್ಯೆಯೊಂದಿಗೆ ಭಾರತವು

ಚೀನಾವನ್ನು ಹಿಂದಿಕ್ಕಿದೆ. ಮಾತ್ರವಲ್ಲ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. 

ಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕ ಇತ್ತೀಚಿನ ಅಂಕಿಸಂಖ್ಯೆಗಳನ್ನು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದ ಸಾಧನೆ ಎದ್ದು ಕಂಡಿದೆ. 


Leave a Comment