ಹಲವು ವಸ್ತುಗಳ ಮೇಲಿನ ಜಿಎಸ್‌ಟಿ ಪರಿಷ್ಕರಣೆ

Coastal Bulletin
ಹಲವು ವಸ್ತುಗಳ ಮೇಲಿನ ಜಿಎಸ್‌ಟಿ ಪರಿಷ್ಕರಣೆ

ಕೇಂದ್ರ ಸರ್ಕಾರವು ಕೆಲವು ಸರಕುಗಳ ಮೇಲಿನ ಜಿಎಸ್‌ಟಿ ಇಳಿಸಲು ನಿರ್ಧರಿಸಿದ್ದು, ಇತರೆ ವಸ್ತುಗಳ ಮೇಲೆ ಜಿಎಸ್‌ಟಿ ವಿನಾಯಿತಿ ನೀಡಿದ್ದು, ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.

 ಫ್ರಿಶ್ ಸೆಲ್ಯುಬುಲ್‌ಪೇಸ್ಟ್, ಎಲ್‌ಡಿ ಸ್ಲ್ಯಾಗ್, ಬೇಯಿಸದ ಮತ್ತು ಹುರಿಯದ ತಿಂಡಿ ಉಂಡೆಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 18 ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ. ಇನ್ನು ಅನುಕರಣೆ ಝರಿ ದಾರದ ಮೇಲಿ ಜಿಎಸ್‌ಟಿಯನ್ನು ಶೇಕಡಾ 12ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ. ಹಾಗೂ ಸಿನಿಮಾ ಹಾಲ್‌ಗಳಲ್ಲಿ ಆಹಾರ ಮತ್ತು ಪಾನೀಯಗಳ ಮೇಲಿನ ಜಿಎಸ್‌ಟಿಯನ್ನು ಶೇ.18ರಿಂದ

ಶೇ.5ಕ್ಕೆ ಇಳಿಸಲಾಗಿದೆ. 

ಇನ್ನೂ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕ್ಯಾನ್ಸರ್ ನಿರೋಧಕ ಔಷಧ ಮತ್ತು ಇತರ ಅಪರೂಪದ ಖಾಯಿಲೆಗಳ ಔಷಧ, ಖಾಸಗಿ ಕಂಪನಿಗಳು ಕೈಗೊಳ್ಳುವ ಉಪಯುಕ್ತ ಉಡಾವಣಾ ಸೇವೆಗಳನ್ನು ಜಿಎಸ್ಟಿ ವ್ಯಾಪ್ತಿಯಿಂದ ಮುಕ್ತಗೊಳಿಸಲಾಗಿದೆ. ಮಾತ್ರವಲ್ಲ, ಆನ್ ಲೈನ್ ಗೇಮಿಂಗ್, ಕುದುರೆ ರೇಸ್, ಕ್ಯಾಸಿನೋಗಳ ಪೂರ್ಣ ವಹಿವಾಟಿನ ಮೇಲೆ ಶೇ.28ರಷ್ಟು ತೆರಿಗೆ ವಿಧಿಸುವಂತೆ ನಿರ್ಧಾರವನ್ನು ಕೈಗೊಂಡಿದೆ. 


Leave a Comment