ಕೇರಳ: ಖಾಸಗಿ ಬಸ್ ಮತ್ತು ಲಾರಿ ಡಿಕ್ಕಿ, ಓರ್ವ ಮೃತ್ಯು

Coastal Bulletin
ಕೇರಳ: ಖಾಸಗಿ ಬಸ್ ಮತ್ತು ಲಾರಿ ಡಿಕ್ಕಿ, ಓರ್ವ ಮೃತ್ಯು

ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತೊಟ್ಟಡ ಎಂಬಲ್ಲಿ ಮಧ್ಯರಾತ್ರಿ ಖಾಸಗಿ ಬಸ್ ಮತ್ತು ಲಾರಿ ಡಿಕ್ಕಿ ಸಂಭವಿಸಿದ ಪರಿಣಾಮ ದುರ್ಘಟನೆ ನಡೆದಿದೆ. ಈ ಘಟನೆಯ ಪರಿಣಾಮ ಬಸ್ ಪ್ರಯಾಣಿಕನೋರ್ವ ಸಾವನ್ನಪ್ಪಿದ್ದಾನೆ.

ಮಂಗಳೂರಿನ ಪತ್ತನಂತಿಟ್ಟಕ್ಕೆ ತೆರಳುತ್ತಿದ್ದ ಕಲ್ಲಡ್ಕ ಬಸ್ ಹಾಗೂ ಕಣ್ಣೂರಿಗೆ ತೆರಳುತ್ತಿದ್ದ ಸರಕು ಸಾಗಣೆ ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ದುರ್ಘಟನೆ ನಡೆದಿದೆ.

ಬಸ್‌ನಲ್ಲಿ ಒಟ್ಟಾಗಿ 24 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಚಾಲಕ ಲಾರಿಯ ಕ್ಯಾಬಿನ್‌ನಲ್ಲಿ ಸಿಲಕಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಹೊರತೆಗೆದಿದ್ದಾರೆ. ಗುಡುಗು ಸಿಡಿಲಿನ ರಭಸಕ್ಕೆ ಬಸ್ ಮೂರು ಬಾರಿ ಪಲ್ಟಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 


Leave a Comment