ಗುರುವಾಯೂರು ದೇವಸ್ಥಾನಕ್ಕೆ ಕಾಣಿಕೆಯಾಗಿ ಮಹೀಂದ್ರ ಎಸ್‌ಯುವಿ ಆಗಮಿಸಿದೆ. ಮಹೀಂದ್ರಾ ಆಯಂಡ್ ಮಹೀಂದ್ರಾ ಲಿಮಿಟೆಡ್‌ನ ಅಟೋಮೋಟಿವ್ ಟೆಕ್ನಾಲಜಿ ಮತ್ತು ಪ್ರಾಡಕ್ಟ್ ಡೆವಲಪ್‌ಮೆಂಟ್ ಮುಖ್ಯಸ್ಥ ಆರ್ ವೇಲುಸ್ವಾಮಿ ಅವರು ದೇವಸ್ವಂ ಬೋರ್ಡ್ ಅಧ್ಯಕ್ಷ ವಿಕೆ ವಿಜಯನ್ ಅವರಿಗೆ ಎಸ್‌ಯುವಿ ಕೀ ಹಸ್ತಾಂತರಿಸಿದ್ದಾರೆ. ದೇವಸಂ ಬೋರ್ಡ್ ಈ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಹರಾಜಿನಲ್ಲಿ ಮಾರಾಟ ಮಾಡಿ ದೇವಸ್ಥಾನಕ್ಕೆ ದೊಡ್ಡ ಮೊತ್ತವನ್ನು ಸಂಗ್ರಹಿಸಿದ್ದರು.
ಭಾರತದ ಅತಿ ದೊಡ್ಡ ಯುಟಿಲಿಟಿ ವಾಹನ ತಯಾರಿಕಾ ಸಂಸ್ಥೆಯಾ ಮಹೀಂದ್ರಾ ಗುರುವಾಯೂರು ದೇವಸ್ಥಾನಕ್ಕೆ ವಾಹನವನ್ನು ಅರ್ಪಿಸುತ್ತಿರುವುದು ಇದು ಎರಡನೇ ಬಾರಿ. ಮಹೀಂದ್ರಾ ಎಕ್ಸ್ ಯುವಿ 700 ಟಾಪ್-ಎಂಡ್ ಅಟೋಮ್ಯಾಟಿಕ್ ಎಸ್‌ಯುವಿಯ ಬೆಲೆಯು
ಕೇರಳದಲ್ಲಿ ಸುಮಾರು ರೂ 28.50 ಲಕ್ಷವಾಗಿದೆ.
ಕಳೆದ ಬಾರಿ ಕೆಂಪು ಬಣ್ಣದ ಆಫ್-ರೋಡರ್ ವಾಹನವನ್ನು ದೇವಸ್ಥಾನಕ್ಕೆ ನೀಡಲಾಗಿತ್ತು. ಆದರೆ ಈ ಬಾರಿ ಶಾಂತಿಯ ಬಿಳಿ ಬಣ್ಣದ ಮಾದರಿಯಾಗಿ ಮಹೀಂದ್ರ ವಾಹನವನ್ನು ಕಾಣಿಕೆ ರೂಪದಲ್ಲಿ ನೀಡಲಾಗಿದೆ.















