ಕೇರಳದಲ್ಲಿ 5 ವರ್ಷದ ಬಾಲಕಿಯ ಮೇಲೆ ರೇಪ್’

Coastal Bulletin
ಕೇರಳದಲ್ಲಿ 5 ವರ್ಷದ ಬಾಲಕಿಯ ಮೇಲೆ ರೇಪ್’

5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಹತ್ಯೆಗೈದಿರುವುದು ಮಾತ್ರವಲ್ಲ ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿಸಿ ಎಸೆದಿರುವ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಡೆದಿದೆ.

ಇಂದು ಬೆಳಿಗ್ಗೆ ಆರೋಪಿಯು ತಾನು ಮಾಡಿರುವ ಅಪರಾಧದ ಬಗ್ಗೆ ಒಪ್ಪಿಕೊಂಡಿದ್ದು, ಮಗುವನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದ ಎಂಬುದನ್ನು ತೋರಿಸಿದ್ದಾನೆ. ಮಾತ್ರವಲ್ಲ ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿದ್ದು, ಜವುಗು ಪ್ರದೇಶದಲ್ಲಿ ಎಸೆದ ನಂತರ ಆಕೆಯ ದೇಹವನ್ನು ಮುಚ್ಚಲು ಕಸ ಮತ್ತು ಗೋಣಿಚೀಲಗಳನ್ನು ಬಳಸಿದ್ದಾನೆ ಎಂಬುದಾಗಿಯು ಒಪ್ಪಿಕೊಂಡಿದ್ದಾನೆ ಎಂದು ಎರ್ನಾಕುಲಂ ಎಸ್ಪಿ ವಿವೇಕ್ ಕುಮಾರ್

ತಿಳಿಸಿದ್ದಾರೆ. 

ಬಾಲಕಿಯು ಬಿಹಾರದ ವಲಸೆ ಕಾರ್ಮಿಕ ದಂಪತಿಯ ಮಗಳು. ಈಕೆ ಇಲ್ಲಿನ ಗ್ಯಾರೇಜ್ ಜಂಕ್ಷನ್‌ನಲ್ಲಿರುವ ಮನೆಯಿಂದ ಶುಕ್ರವಾರ ನಾಪತ್ತೆಯಾಗಿದ್ದಳು. ಬಾಲಕಿಗಾಗಿ ಎಲ್ಲೆಡೆ ಹುಡುಕಾಟ ನಡೆಸಲಾಗಿತ್ತು. ಬಳಿಕ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವ ಬಗ್ಗೆ ಆತ ವಿಷಯ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿದೆ. 


Leave a Comment