Coastal Bulletin

ಮೇಷ : ನಿಮಗೆ ರಾಹು ನಿಮ್ಮ ರಾಶಿಯಲ್ಲಿ ಕೇತು ಏಳನೇ ಮನೆಯಲ್ಲಿ ಇರುವುದು ಸಂಸಾರಿಕ ವಿಷಯದಲ್ಲಿ ಕೊಂಚ ಅಲ್ಲೋಲಕಲ್ಲೋಲವಾಗುತ್ತದೆ. ಗಂಡ-ಹೆಂಡತಿ ನಡುವೆ ವೈಮನಸ್ಸು ಉಂಟಾಗಬಹುದು. ಪರಸ್ಪರ ದೋಷಾರೋಪಣೆ ಜಗಳ ಮನಸ್ತಾಪ ಇರುತ್ತದೆ. ಆದಷ್ಟು ಒಬ್ಬರ ಮಾತನ್ನು ಒಬ್ಬರು ಗೌರವಿಸಿ ಅದರಂತೆ ನಡೆದುಕೊಳ್ಳಿ.‌ ಸಾಮಾಜಿಕವಾಗಿ ಎಚ್ವರಿಕೆಯಿಂದ ಇರಿ. ಅಪವಾದಗಳು ಬರಬಹುದು.

ವೃಷಭ : ಪ್ರೀತಿ ಪ್ರೇಮದ ವಿಷಯದಲ್ಲಿ ಜಾಗರೂಕರಾಗಿರಿ.‌ ನಿಮ್ಮ ಪ್ರೀತಿ‌ ಪ್ರೇಮ ಆದಷ್ಟು ಗುಪ್ತಗಾಮಿನಿಯಾಗಿರಲಿ. ಪ್ರಕಟಗೊಳ್ಳಲು ಈಗ ಸಕಾಲ ಅಲ್ಲ. ಈಗ ಎಚ್ಚರಿಕೆ ವಹಿಸಿದರೆ ಮುಂದೆ ನಿಮಗೆ ಸಮಸ್ಯೆಗಳಾಗುವುದು ತಪ್ಪುತ್ತದೆ. ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ. ಏನು ಮಾತಾಡಬೇಕಾದರೂ ಮಾಡಬೇಕಾದರೂ ನಾಲ್ಕು ಸಲ ಯೋಚಿಸಿ ಮುಂದುವರೆಯಿರಿ.‌ ದುಡುಕಿನಿಂದ ಅನಾಹುತಗಳಾಗುತ್ತದೆ

ಮಿಥುನ : ಈಗ ನಿಮಗೆ ಹಟ ಯಾರು ಬುದ್ಧಿವಾದ ಹೇಳಿದರೂ ಕೇಳದಂತ ಹಠ. ಇದು ಒಳ್ಳೆಯದಲ್ಲ. ನಿಮ್ಮ ವಿನಾಕಾರಣ ಕೋಪ ಹಟದಿಂದ ಅಮೂಲ್ಯವಾದದ್ದೇನೋ ಕಳೆದುಕೊಳ್ಳುತ್ತೀರ. ಮತ್ತೆ ಪಶ್ಚಾತ್ತಾಪ ಪಟ್ಟು ಫಲವಿಲ್ಲ. ಹಿರಿಯರು ಹಿತೈಷಿಗಳು ಹೇಳುವ ಮಾತನ್ನು ಆಲಿಸಿ.‌ ತಣ್ಣಗೆ ಕುಳಿತು ಯೋಚಿಸಿ. ನಿಮ್ಮ ನಿರ್ಧಾರ ಸರಿ‌ಆಗುತ್ತದೆ. ವೃತ್ತಿಯಲ್ಲಿ ಯಶಸ್ಸಿದೆ.

ಕಟಕ : ಕಾರ್ಯ ಕ್ಷೇತ್ರದಲ್ಲಿ ಒತ್ತಡ. ನಾಲ್ಕು ಜನ ಮಾಡುವ ಕೆಲಸ ನಿಮ್ಮೊಬ್ಬರ ಮೇಲೆಯೇ ಬಿದ್ದಿದೆ.‌ ಕುಟುಂಬದಲ್ಲೂ ಒತ್ತಡ ಇದೆ. ದೈಹಿಕ ಶ್ರಮ ವಿಶ್ರಾಂತಿ‌ ಇಲ್ಲದ ಜೀವನ. ಮನೆಯಲ್ಲಿ ಸಣ್ಣಪುಟ್ಟದಕ್ಕೂ ಕಿರಿಕಿರಿ ಮಾಡಿಕೊಳ್ಳುತ್ತೀರಿ. ವಾಹನ ಓಡಿಸುವಾಗ ಜಾಗ್ರತೆ ಇರಲಿ. ಅರ್ಹರಾದ ನಿಮಗೆ ಸಿಗುವ ಸವಲತ್ತು ಅನರ್ಹರಿಗೆ ಸಿಕ್ಕು ನಿಮ್ಮ ಮನಸ್ಸಿಗೆ ಬೇಸರವಾಗುತ್ತದೆ. ‌ ಮನೆಯಿಂದ ದೂರ ಇರುವ ಸಂಭವ ಇದೆ. ವರ್ಗಾವಣೆ ಆಗಬಹುದು.

ಸಿಂಹ : ಯುಗಾದಿಯಿಂದಲೇ ನಿಮಗೆ ಗುರುಬಲ ಶುರುವಾಗುತ್ತದೆ. ನಿಂತು ಹೋಗಿದ್ದ ಕೆಲಸಗಳು‌ಈಗ ಚಾಲನೆ ಪಡೆದುಕೊಳ್ಳುತ್ತದೆ. ನೀಧಾನವಾಗಿದ್ದ ಜೀವನ ಈಗ ಚಟುವಟಿಕೆ ಪಡೆದುಕೊಳ್ಳುತ್ತದೆ. ಮೈಕೊಡವಿ ಏಳುತ್ತೀರಿ. ಈಗ ಮೂರರ ಕೇತು ಕೂಡ ನಿಮಗೆ ಧೈರ್ಯ ಸಾಹಸಗಳನ್ನು ಕೊಟ್ಟು ಕಾರ್ಯಾನುಕೂಲ ಮಾಡುತ್ತಾನೆ. ಭಾಗ್ಯಾಧಿಪತಿ ಹಾಗೂ ಸುಖಸ್ಥಾನಾಧಿಪತಿ ಕುಜ ಲಾಬನಸ್ಥಾನದಲ್ಲಿ ಇದ್ದು ನಿಮಗೆ ಧನಲಾಭವನ್ನೂ ಯಶಸ್ಸನ್ನೂ ಕೊಡುತ್ತಾನೆ.

ಕನ್ಯಾ : ಏಳರ ಗುರು ನಿಮಗೆ ಅನುಕೂಲವಿದ್ದರೂ ಈಗ ಗುರುಬಲ ಕಡಿಮೆಯಾಗುವುದರಿಂದ ಕೆಲಸಕಾರ್ಯಗಳಲ್ಲಿ ವಿಳಂಬಗತಿ ನಿಮ್ಮ ಅನುಭವಕ್ಕೆ ಬರುತ್ತದೆ. ಕಾರ್ಯ ಕ್ಷೇತ್ರದಲ್ಲಿ ಒತ್ತಡ ಇರುತ್ತದೆ.‌ ಎರಡರ ಕೇತುವಿನಿಂದ ಮಾತಿನಿಂದ ಹಾನಿ.‌ ಜಾಗ್ರತೆ ವಹಿಸಿ. ‌ಎಂಟರ ರಾಹುವಿನಿಂದ ಆರೋಗ್ಯದಲ್ಲಿ ತೊಂದರೆ ಇದೆ. ನಾಲ್ಕನೇ ಮನೆ ಅಧಿಪತಿ ಏಳನೇ ಮನೆಯಲ್ಲಿ ಇರುವುದು ಸಂಗಾತಿಯಿಂದ ತಾಯಿಯಿಂದ ಬೆಂಬಲ ಸಹಕಾರ ಇರುತ್ತದೆ.‌ 

ತುಲಾ : ಈಗ ನಿಮಗೆ ಯುಗಾದಿಯಿಂದಲೇ ಗುರುಬಲ ಅನುಭವಕ್ಕೆ ಬಂದರೂ ಪಂಚಮ ಶನಿಯ ಬಿಸಿಯನ್ನೂ ನೀವು ಅನುಭವಿಸಬೇಕು. ನೀವಾಗಿ‌ ಮಾಡಿಕೊಳ್ಳುವ ಎಡವಟ್ಡುಗಳಿಗೆ ಸಂಕಟ ಅವಮಾನವನ್ನು ಅನುಭವಿಸುತ್ತೀರಿ. ಕೋತಿಹುಣ್ಣು ಬ್ರಹ್ಮರಾಕ್ಷಸ ಎಂಬಂತೆ ಆಗುತ್ತದೆ.‌ ಜಾಗ್ರತೆಯಾಗಿ‌ರಿ. ಸಾಮಾಜಿಕ ಜಾಲತಾಣಗಳು ಉಪಯೋಗಿಸುವವರು ಎಚ್ಚರಿಕೆಯಿಂದ ನಿಭಾಯಿಸಬೇಕು. ಹಣಕಾಸಿನ ಒತ್ತಡ 

ವೃಶ್ಚಿಕ : ಈ ಯುಗಾದಿಯಿಂದ ನಿಮಗೆ ಗುರುಬಲ ಕಡಿಮೆ ಯಾಗುತ್ತದೆ.

ಶನಿ ನಾಲ್ಕನೇ ಮನೆಯಲ್ಲಿ ಇದ್ದಾನೆ. ಇವೆರಡೂ ನಿಮಗೆ ಅನುಕೂಲ ಇಲ್ಲ.‌ ಈಗ ಸದ್ಯಕ್ಕೆ ರಾಹು ಮಾತ್ರ ನಿಮಗೆ ಬೆಂಬಲವಾಗಿ‌ಇದ್ದಾನೆ. ಇಷ್ಟು ದಿನ ಸರಾಗವಾಗಿ ಹರಿಯುತ್ತಿದ್ದ ಜೀವನ ಈಗ ಕೊಂಚ ನಿಧಾನವಾಗುತ್ತದೆ. ಯಾವುದೇ ಕೆಲಸದಲ್ಲೂ ನಿಧಾನ‌ ಪ್ರಗತಿ. ಹೊಸ ಪ್ರಾಜೆಕ್ಟ್ ಗಳು ಸಿಗುವುದು ತಡವಾಗಬಹುದು. ನೀವಂದುಕೊಂಡ ಗುರಿ ಮುಟ್ಟಲು ಅಡೆತಡೆ ಎದುರಾಗಬಹುದು

ಧನು : ಈಗ ನಿಮಗೆ ಮುಟ್ಟಿದ್ದೆಲ್ಲ ಚಿನ್ನವಾಗುವ ಸಮಯ. ಈ ಸಮಯವನ್ನು ಯೋಗ್ಯವಾಗಿ‌ ಪರಿವರ್ತಿಸಿಕೊಳ್ಳಿ. ತಲೆ ಗಟ್ಟಿ ಇದೆ ಎಂದು ಕಲ್ಲಿಗೆ ಚಚ್ಚಬಾರದು. ಒಂದು ದೊಡ್ಡ ಯೋಜನೆ ನಿಮ್ಮ ಕೈಸೇರಲಿದೆ. ಹಣ ಬರುವ ದಾರಿ ಸರಾಗವಾಗಿದೆ. ಮಕ್ಕಳೊಡನೆ ಮುನಿಸು ಇರುತ್ತದೆ. ದೂರ ದೂರ ಪ್ರವಾಸಗಳನ್ನು ಮಾಡುವಿರಿ. ವಿದೇಶ ಪ್ರಯಾಣ ಇದೆ. ವೃತ್ತಿಯಲ್ಲಿ ಬಡ್ತಿ ಇದೆ. ನಿಮ್ಮನ್ನು ವಿರೋಧಿಸಿದವರ ಮುಂದೆ ಸೆಡ್ಡು ಹೊಡೆದು ನಿಲ್ಲುತ್ತೀರಿ.

ಮಕರ : ಮನೆಯಲ್ಲಿ ಕೊಂಚ ಅಹಿತಕರ ವಾತಾವರಣ. ನೆಮ್ಮದಿ ಕೆಡುವಂತ ಘಟನೆಗಳು ನಡೆಯುತ್ತದೆ. ಪ್ರೀತಿ ಪ್ರೇಮದ ವಿಷಯದಲ್ಲಿ ಜಾಗ್ರತೆ ಇರಲಿ. ಎರಡನೇ ಮನೆಯ ಶನಿ ಹಣಕಾಸಿನ ಸ್ಥಿತಿ ಸುಗಮ ಮಾಡಿದರೂ ಕುಟುಂಬದಲ್ಲಿ ಕೊಂಚ ಅಶಾಂತಿಯನ್ನೂ ಕೊಡುತ್ತಾನೆ.‌ ನಂಬಿದವರಿಗೆ ಮೋಸ ಮಾಡಬೇಡಿ. ಕೆಲವೇ ದಿನಗಳಲ್ಲಿ ನಿಮ್ಮ ವೃತ್ತಿಗೆ ಸಂಬಂಧಿಸಿದ ಒಂದು ಬದಲಾವಣೆ ಇದೆ. ಇದು ನಿಮಗೆ ಶುಭವನ್ನು ತರುತ್ತದೆ.‌ ಪ್ರಯಾಣ ಇದೆ. ವಾಹನದಿಂದ ಸ್ವಲ್ಪ ಖರ್ಚು ಬರುತ್ತದೆ. ಮಕ್ಕಳಿಂದ ಖುಷಿಯ ಸುದ್ದಿ‌ಇದೆ. ವಿದ್ಯಾರ್ಥಿಗಳಿಗೆ ಶುಭಫಲ ಇದೆ.

ಕುಂಭ : ಈಗ ನಿಮಗೆ ಸಹಾಯ ಮಾಡುವುದು ರಾಹು ಒಬ್ಬನೇ. ಇಷ್ಡು ದಿನ ಇದ್ದ ಗುರುಬಲ ಈಗ ಕಡಿಮೆಯಾಗುತ್ತದೆ. ಇಷ್ಟು ದಿನ ನೀವು ಕೈಹಾಕಿದ ಕೆಲಸಗಳೆಲ್ಲ ಶೀಘ್ರವಾಗಿ ಮುಗಿಸಿ ಜಯಶೀಲರಾಗುತ್ತಿದ್ದಿರಿ. ಈಗ ನಿಮಗೆ ಜೀವನದ ನಿಧಾನ ಚಲನೆಯ ಅನುಭವ ಆಗುತ್ತದೆ. ಮುಂದೆ ಕೆಲವು ದಿನಗಳ ನಂತರ ಸೂರ್ಯ ಮೇಷರಾಶಿಗೆ ಪ್ರವೇಶವಾದಾಗ ಕೊಂಚ ಶುಭಫಲಗಳನ್ನು ಅನುಭವಿಸುತ್ತೀರಿ.‌ ಮನಸ್ಸಿನಲ್ಲಿ ಏನೋ ಭಯ ನಿಮ್ಮ ನೆಮ್ಮದಿಯನ್ನು ಕೆಡಿಸುತ್ತದೆ. ರಾಶಿಯಲ್ಲೇ ಇರುವ ಶನಿ ಕೂಡ ನಿಮಗೆ ಅನನುಕೂಲವಾಗಿದ್ದಾನೆ. ಮನಸಿನಲ್ಲಿ‌ ಒಂದು‌ ಯೋಚಿಸಿದರೆ ಮಾಡುವುದೊಂದಾಗುತ್ತದೆ. ಎಚ್ಚರಿಕೆ ವಹಿಸಿ

ಮೀನ : ಈಗ ನಿಮಗೆ ಸಾಡೆಸಾತಿ ಶನಿಯ ಪ್ರಭಾವ ಇದ್ದರೂ ಈಗ ಯುಗಾದಿಯಿಂದಲೇ ಗುರುಬಲ ಪ್ರಾರಂಭವಾಗಿದೆ. ಹಾಗಾಗಿ ಭಯ ಪಡುವ ಕಾರಣ ಇಲ್ಲ. ಗುರುಬಲ ಇದ್ದಾಗ ಸಾಡೆಸಾತಿ ಶನಿ ಅಷ್ಟು‌ ತೊಂದರೆ ಕೊಡುವುದಿಲ್ಲ. ವೃತ್ತಿಯಲ್ಲಿ ಬೆಳವಣಿಗೆ, ಪ್ರವಾಸ, ಸ್ನೇಹಿತರ ಭೇಟಿ, ಪಿಕ್ ನಿಕ್ ಮೊದಲಾದ ಮನಸ್ಸಿಗೆ ಖುಷಿ‌ಕೊಡುವ ಸಂಗತಿಗಳು‌ ಇವೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. 

Leave a Comment