Coastal Bulletin

ಉಡುಪಿ:ಉಡುಪಿಯ ಅಪಾರ್ಟ್ಮೆಂಟ್’ವೊಂದರಲ್ಲಿ ಮಹಿಳೆಯೋರ್ವರನ್ನು ದುಷ್ಕರ್ಮಿಗಳು ಕುತ್ತಿಗೆಗೆ ವಯರ್ ಬಿಗಿದು ಭೀಕರವಾಗಿ ಕೊಲೆಗೈದ ಘಟನೆ ಬ್ರಹ್ಮಾವರ ಸಮೀಪ ಕುಮ್ರಗೋಡಿನಲ್ಲಿ ನಡೆದಿದೆ.ವಿಶಾಲ ಗಾಣಿಗ (35) ಕೊಲೆಯಾದ ಮಹಿಳೆ.

35 ವರ್ಷದ ವಿಶಾಲ ಗಾಣಿಗ ಪತಿ ರಾಮಕೃಷ್ಣ ಗಾಣಿಗ ಹಾಗೂ ಪುತ್ರಿ ಜೊತೆ ದುಬೈನಲ್ಲಿ ವಾಸವಾಗಿದ್ದರು. ಕಳೆದ ಜೂನ್ 30ರಂದು ಉಡುಪಿಗೆ ಮಗಳ ಜೊತೆ ಆಗಮಿಸಿದ್ದರು. ತಂದೆ ಮನೆಯಲ್ಲಿ ಉಳಿದುಕೊಂಡಿದ್ದ ವಿಶಾಲ ಬ್ರಹ್ಮಾವರದಲ್ಲಿರೋ ಅಪಾರ್ಟ್ ಮೆಂಟ್‍ಗೆ ಹೋಗಿ ಬಳಿಕ

ಬ್ಯಾಂಕ್ ಕೆಲಸ ಮುಗಿಸಿಕೊಂಡು ಬರೋದಾಗಿ ಹೇಳಿ ಹೋಗಿದ್ದರು.ಆದರೆ ಸಂಜೆಯಾದ್ರೂ ಮನೆಗೆ ಬಾರದ ಮಗಳನ್ನು ಹುಡುಕಿಕೊಂಡು ಬ್ರಹ್ಮಾವರಕ್ಕೆ ತಂದೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಮಗಳು ಅಪಾರ್ಟ್ ಮೆಂಟ್‍ನ ರೂಮ್ ಅಲ್ಲಿ ಕುತ್ತಿಗೆಗೆ ವಯರ್ ಬಿಗಿದ ಸ್ಥಿತಿಯಲ್ಲಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

Leave a Comment