Coastal Bulletin

ಬೆಂಗಳೂರು:ಇನ್ನು ಮುಂದೆ ರಾಜ್ಯದಲ್ಲಿ ಹೋಮ್‌ ವರ್ಕ್ ಗೆ ಬ್ರೇಕ್ ಬೀಳಲಿದೆ. ಶಿಕ್ಷಕರು ಎರಡನೇ ತರಗತಿವರೆಗೆ ಮಕ್ಕಳಿಗೆ ಹೋಮ್ ವರ್ಕ್ ಕೊಡುವ ಹಾಗಿಲ್ಲ. ಸರ್ಕಾರಿ ಶಾಲೆಗಳಿಗೆ ಈ ವರುಷದಿಂದಲೇ ಇದು ಜಾರಿಯಾಗಲಿದ್ದು, ನಲಿ-ಕಲಿ ರೀತಿ ಮಾತ್ರ ಪುಟ್ಟ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ.

ಸರ್ಕಾರಿ ಶಾಲೆ ರೀತಿ ಖಾಸಗಿ ಶಾಲೆಗೂ ಈ ಆದೇಶ ಹೊರಡಿಸಲು ಶಿಕ್ಷಣ ಇಲಾಖೆ ತಯಾರಿ ನಡೆಸುತ್ತಿದ್ದು, ಮದ್ರಾಸ್ ಹೈಕೋರ್ಟ್ ಹಾಗೂ ಕೇಂದ್ರ ಶಿಕ್ಷಣ ಸಚಿವರ ಹೇಳಿಕೆ ಹಿನ್ನೆಲೆ ರಾಜ್ಯದಲ್ಲಿ ಮಕ್ಕಳಿಗೆ ಹೋಮ್ ವರ್ಕ್ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.

ಎನ್ ಇ ಪಿ ಶಿಕ್ಷಣ ಕ್ರಮದ ಪ್ರಕಾರ ಮಕ್ಕಳಿಗೆ ಹೋಮ್ ವರ್ಕ್ ಇಲ್ಲ, ಸರ್ಕಾರಿ ಶಾಲೆಗಳಲ್ಲಿ ಎರಡನೇ ತರಗತಿವರೆಗಿನ ಮಕ್ಕಳಿಗೆ ಹೋಮ್‌ ವರ್ಕ್ ನೀಡುವಂತಿಲ್ಲ. ಆದರೆ ಖಾಸಗಿ ಶಾಲೆಯಲ್ಲಿ ಅತಿ ಹೆಚ್ಚು ಹೋಂ ವರ್ಕ್ ನೀಡುತ್ತಾರೆ, ಇದರಿಂದ

ಮಕ್ಕಳಿಗೆ ಮನೆಯಲ್ಲಿಯೂ ಒತ್ತಡ ಹೇರಲಾಗುತ್ತೆ. ಖಾಸಗಿ ಶಾಲೆಗಳಲ್ಲಿ ಬಾಲ್ಯಾವಸ್ಥೆಯ ಮಕ್ಕಳಿಗೆ ವಿದ್ಯಾಭ್ಯಾಸದ ಒತ್ತಡ ಬೇಡ, ಆಟವಾಡುತ್ತ, ಸಮಾಜದೊಂದಿಗೆ ಬೆರೆತು ತಿಳಿದುಕೊಳ್ಳುವ ವಯಸ್ಸಾಗಿದ್ದು, ಇಂಥ ವಯಸ್ಸಿನಲ್ಲಿ ಕನಿಷ್ಟ 2ನೇ ತರಗತಿವರೆಗೆ ಹೋಂ ವರ್ಕ್ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ಯೋಚನೆಮಾಡಿದೆ.

ಎನ್ ಇ ಪಿಯಲ್ಲಿ ಸ್ಪಷ್ಟವಾಗಿ 2ನೇ ತರಗತಿವರೆಗೆ ಮಕ್ಕಳಿಗೆ ಹೋಂ ವರ್ಕ್ ನೀಡುವಂತಿಲ್ಲ ಎಂದು ಹೇಳಲಾಗಿದ್ದು, ಈಗಾಗಲೇ ಸರಕಾರಿ ಶಾಲೆಗಳಲ್ಲಿ ನಲಿಕಲಿ ಪದ್ಧತಿ ಜಾರಿಯಲ್ಲಿದೆ. ಇನ್ ಇ ಪಿ‌ ಜಾರಿ ಮುನ್ನವೇ ಖಾಸಗಿ ಶಾಲೆಯಲ್ಲಿ ಹೋಂ ವರ್ಕ್ ಸ್ಥಗಿತಗೊಳಿಸುವ ಕುರಿತು ಚಿಂತನೆ ನಡೆದಿದೆ.

Leave a Comment