ಬಂಟ್ವಾಳ : ಕ್ಯಾಂಪ್ಕೋ ಸಂಸ್ಥೆಯ ಮಂಚಿ ಶಾಖೆಯಲ್ಲಿ ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ ಯೋಜನೆಯಡಿಯಲ್ಲಿ ಕ್ಯಾಂಪ್ಕೋದ ಸಕ್ರೀಯ ಸದಸ್ಯರಾದ ಶ್ರೀ ಲಿಂಗಪ್ಪ ಮೂಲ್ಯ ಸಜೀಪ ಮೂಡ ಅವರ ಮಗಳು ರಶ್ಮಿತ ಆಕಸ್ಮಿಕ ಮರಣ ಹೊಂದಿದ ಕಾರಣ ಕ್ಯಾಂಪ್ಕೋ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರೂ ಆಗಿರುವ ಶ್ರೀ ಎಸ್.ಆರ್. ಸತೀಶ್ಚಂದ್ರ ಅವರು ಶ್ರೀ ಲಿಂಗಪ್ಪ ಮೂಲ್ಯ ರವರಿಗೆ ರೂ. 50000/- ಸಹಾಯಧನದ ಚೆಕ್ ನ್ನು ಮೇ 4ರಂದು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋದ ಮುಖ್ಯ ಮಾರುಕಟ್ಟೆ ಅಧಿಕಾರಿ ಶ್ರೀ ಗೋವಿಂದ ಭಟ್, ಶಾಖಾಧಿಕಾರಿ ಶ್ರೀ ಶಿವಾನಂದ ಕಣ್ವತೀರ್ಥ, ಮಂಚಿ ವ್ಯ.
ಸೇ.ಸ ಸಂಘದ ಸಿ. ಇ. ಒ ಶ್ರೀ ನಾರಾಯಣ ಪಿ, ನೌಕರರಾದ ಶ್ರೀ ಮಹಾಬಲ ಹಾಗೂ ಕ್ಯಾಂಪ್ಕೋದ ಸದಸ್ಯರು ಉಪಸ್ಥಿತರಿದ್ದರು.














