Coastal Bulletin

ಬಂಟ್ವಾಳ:ಕಳೆದ 30 ವರ್ಷಗಳಲ್ಲಿ ಅವಿಭಜಿತ ಜಿಲ್ಲೆಯ ನೂರಾರು ದೇವಸ್ಥಾನ ಮತ್ತು ದೈವಸ್ಥಾನಗಳು ಅಲ್ಲಿನ ಸ್ಥಳ ಸಾನಿಧ್ಯ ಮತ್ತು ಶಕ್ತಿಯ ಪರಿಣಾಮದಿಂದಲೇ ಜೀರ್ಣೋದ್ದಾರಗೊಂಡು ಸಮಾಜಕ್ಕೆ ಸಮರ್ಪಣೆ ಯಾಗಿದೆ. ಭಕ್ತರ ಶ್ರದ್ಧೆ ಮತ್ತು ನಂಬಿಕೆಯಿಂದ ನಿರಂತರವಾಗಿ ದೇವರ ಆರಾಧನೆ ನಡೆಯಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಇಲ್ಲಿನ ಮಣಿನಾಲ್ಕೂರು ಗ್ರಾಮದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಬುಧವಾರ ನಡೆದ ದೇವರ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ 300ಕ್ಕೂ ಮಿಕ್ಕಿ ದೇವಾಲಯಗಳಿಗೆ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಮೂಲಕ ನೆರವು ನೀಡಲಾಗಿದ್ದು, ಇದಕ್ಕೆ ಶೇ 20 ರಷ್ಟು ಭಕ್ತರಿಂದಲೂ ನೆರವು ಸಿಗಬೇಕು ಎಂದರು.

ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಧಾರ್ಮಿಕತೆಯಿಂದ ಸಾಮಾಜಿಕ ಪರಿವರ್ತನೆ ಸಾದ್ಯ ಎನ್ನುವುದು ಇಳಿಯೂರು ದೇವಳದಲ್ಲಿ ಕಂಡು ಬಂದಿದೆ ಎಂದರು.

ಇದೇ ವೇಳೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ್ ಜೈನ್, ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಿವಪ್ಪ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಪ್ರಧಾನ ಕಾರ್ಯದರ್ಶಿ ಶಿವರಾಮ ಶೆಟ್ಟಿ ದೋಟ, ಟ್ರಸ್ಟಿ ಜಯ ನಾಯ್ಕ ನೇಲ್ಯಪಲ್ಕೆ, ಮಹಿಳಾ ಸಮಿತಿ ಸದಸ್ಯೆ ಕಾಂಚಲಾಕ್ಷಿ, ಉದ್ಯಮಿ ಸಂಜೀವ ಪೂಜಾರಿ ಬಿ.ಸಿ.ರೋಡು ಇವರನ್ನು

ಸನ್ಮಾನಿಸಲಾಯಿತು.

ಕುಂಬ್ಳೆ ದರ್ಬಾರ್ ಕಟ್ಟೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಅಹ್ಮದ್ನಗರ, ಪೆದಮಲೆ ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿಶಂಕರ್ ಶೆಟ್ಟಿ ಬಡಾಜೆಗುತ್ತು, ಬಾಚಕೆರೆ ಕ್ಷೇತ್ರದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ಕಕ್ಯಬೀಡು ಕ್ಷೇತ್ರದ ಅಧ್ಯಕ್ಷ ಡಾ. ಸತ್ಯಶಂಕರ್ ಶೆಟ್ಟಿ, ಉದ್ಯಮಿ ಉದಯ ಹೆಗ್ಡೆ ಬೆಂಗಳೂರು, ಚಂದ್ರಶೇಖರ ಪೂಜಾರಿ ಕಂರ್ಬಡ್ಕ, ಡಾ. ರವಿ ಕಕ್ಯಪದವು, ಸಾಯಿ ಗಿರಿಧರ್ ಶೆಟ್ಟಿ ನಡುಮೊಗರುಗುತ್ತು, ಬಾಚಕೆರೆ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ, ಮಣಿನಾಲ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ, ಪಿಡಿಒ ವಿಜಯಲಕ್ಷೀ ದೊಡ್ಡಪತ್ತರ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷೆ ಲಾವಣ್ಯ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಶಿವರಾಮ ಶೆಟ್ಟಿ ದೋಟ, ದೇವಳದ ಟ್ರಸ್ಟಿ ರವೀಂದ್ರ ಟಿ.ಸಿ., ಲಿಂಗಪ್ಪ ಪೂಜಾರಿ ಕೆಂಚನಬೆಟ್ಟು, ಜಯ ನಾಯ್ಕ ನೇಲ್ಯಪಲ್ಕೆ ಇದ್ದರು.

ಜೀರ್ಣೋದ್ದಾರ ಸಮಿತಿ ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲುಗುತ್ತು ಸ್ವಾಗತಿಸಿ, ರಾಜೀವ ಕಕ್ಯಪದವು ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

Leave a Comment