Coastal Bulletin

ಮಂಗಳೂರು :ಅಖಿಲ ಭಾರತ ಮುಂಡಾಲ ಯುವ ವೇದಿಕೆ ವತಿಯಿಂದ ಡಾI ಬಿ.ಆರ್ ಅಂಬೇಡ್ಕರ್ ರವರ 131 ನೇ ಜನ್ಮ ದಿನಾಚರಣೆ ಹಾಗೂ ಪರಿಶಿಷ್ಟ ಜಾತಿ/ ಪಂಗಡದ ಯುವ ಜನತೆಗೆ ಉಜ್ವಲ ಭವಿಷ್ಯದ ದೃಷ್ಟಿಯಿಂದ ಉಚಿತ ವೃತ್ತಿ ಮಾರ್ಗದರ್ಶನ ಮತ್ತು ಸ್ವಯಂ ಉದ್ಯೋಗ ಮಾಹಿತಿ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಮನೋಜ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.ವೇದಿಕೆಯ ಅಧ್ಯಕ್ಷರಾದ ಜಯಚಂದ್ರ ಕೊಟ್ಟಾರ ಕ್ರಾಸ್, ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆಗೈದರು.

ರಘುವೀರ್ ಬಾಬುಗುಡ್ಡ ಸದಸ್ಯರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ , ಮೋಹನಾಂಗಯ್ಯ ಸ್ವಾಮಿ ಅದ್ಯಕ್ಷರು ದಕ ಜಿಲ್ಲಾ ಎಸ್ ಸಿ / ಎಸ್ ಟಿ ಕೈಗಾರಿಕೋದ್ಯಮಿಗಳ ಸಂಘ (ರಿ). ದೇವದಾಸ್ ಬಿ ಅಧ್ಯಕ್ಷರು, ಕೋಟೆದ ಬಬ್ಬುಸ್ವಾಮಿ ದೈವಸ್ಥಾನ ಸೂಜಿಕಲ್ಲು ಮಲ್ಲಕಾಡು.ಉಮೇಶ್ ಕುಮಾರ್. ನಿವೃತ್ತ ಮುಖ್ಯ ವ್ಯವಸ್ಥಾಪಕರು ಕೆನರಾ

ಬ್ಯಾಂಕ್ ಮಂಗಳೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಡಾl ಮೋಹನ್ ಸಿಂಘೆ ಪ್ರಾದ್ಯಪಕರು ಮಂಗಳೂರು ವಿಶ್ವವಿದ್ಯಾನಿಲಯ, ರವಿಕುಮಾರ್ ತರಬೇತುದಾರರು ಕೆನರಾ ಬ್ಯಾಂಕ್ ವೃತ್ತ ಕಛೇರಿ ಮೋಹನಾಂಗಯ್ಯ ಸ್ವಾಮಿ ಅಧ್ಯಕ್ಷರು ದಕ ಜಿಲ್ಲಾ ಎಸ್ ಸಿ / ಎಸ್.ಟಿ ಕೈಗಾರಿಕೋದ್ಯಮಿಗಳ ಸಂಘ (ರಿ) ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಸಾಲಿಯಾನ್ ಕದ್ರಿ ಸ್ವಾಗತಿಸಿದರು. ಮಹಿಳಾ ಸದಸ್ಯೆ ಚೈತ್ರ ಮುಲ್ಲಕಾಡ್ ವಂದಿಸಿದರು ಮಾಜಿ ಅಧ್ಯಕ್ಷರಾದ ಕಿರಣ್ ಕುಮಾರ್ ಕೊಡಿಯಾಲ್ ಬೈಲ್ ಕಾರ್ಯಕ್ರಮ ನಿರೂಪಿಸಿದರು.

Leave a Comment