Coastal Bulletin

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಟ, ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಅವರ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿ ತಂದೆ ಡಾ. ರಾಜ್‌ಕುಮಾರ್‌ ಹಾಗೂ ತಾಯಿ ಪಾರ್ವತಮ್ಮ  ಅವರ ಸಮಾಧಿಯ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಈಡಿಗ ಸಂಪ್ರದಾಯದಂತೆ ಭಾನುವಾರ ನಡೆದಿದೆ. 

ಕಂಠೀರವ ಕ್ರೀಡಾಂಗಣದಿಂದ ಭಾನುವಾರ ಬೆಳಗ್ಗೆ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋಗೆ ಅಂತಿಮಯಾತ್ರೆ ಮೂಲಕ ಕರೆತಂದಿದ್ದು, ಬಳಿಕ ವೀರ ಕನ್ನಡಿಗರ ಗಣ್ಯರು ಹಾಗೂ ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ಮಣ್ಣಲ್ಲಿ ಮಣ್ಣಾಗಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್‌,ಪುತ್ರ ವಿನಯ್‌ ರಾಜ್‌ಕುಮಾರ್‌

ಅವರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ.

ಚಿತ್ರನಟ ಪುನೀತ್‌ ರಾಜ್‌ಕುಮಾರ್‌ ನಿಧನದ ಸುದ್ದಿ ತಿಳಿದು ರಾಜ್ಯದ ವಿವಿಧೆಡೆ ಶನಿವಾರ ಮೂವರು ಅಭಿಮಾನಿಗಳು ಹೃದಯಾಘಾತದಿಂದ ಮೃತಪಟ್ಟಿದ್ದು, ಒಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮೂಲಕ ಸಾವಿಗೀಡಾದವರ ಒಟ್ಟು ಸಂಖ್ಯೆ 5ಕ್ಕೇರಿದೆ.

Leave a Comment