Coastal Bulletin

ಬಂಟ್ವಾಳ: ತಾಲೂಕಿನ ಉಳಿ ಗ್ರಾಮದ  ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ  ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ 4 ನೇ ವರ್ಷದ  ಸ್ನೇಹ ಕೂಟ, ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ಅ.31ರಂದು ರವಿವಾರ ನಡೆಯಲಿದೆ.

ಕಂಬಳ ಕೂಟವು ಬೆಳಗ್ಗೆ 8ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ಸಂಜೆ ಸಮಾರೋಪದಲ್ಲಿ ಬಹುಮಾನ ವಿತರಣೆ ನಡೆಯಲಿದೆ. ನೇಗಿಲು ಕಿರಿಯ ಮತ್ತು ನೇಗಿಲು ಹಿರಿಯ

ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಕಾಲು ಪವನು ಚಿನ್ನ ಹಾಗೂ ಟ್ರೋಫಿ ನೀಡಲಾಗುವುದು. ಕಂಬಳಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಘಟಕರು ತಿಳಿಸಿದ್ದಾರೆ.  

Leave a Comment