ಪಕ್ಕಳಪಾದೆ : ಶ್ರೀ ಸ್ವಾಮಿ ಕೊರಗಜ್ಜ ಪೀಠ ಮೇ.10ರಂದು ಕೊರಗ ತನಿಯ ದೈವದ ಶಿಲಾ ಪ್ರತಿಷ್ಠೆ, ನವಕ ಕಲಶಾಭಿಷೇಕ ಹಾಗೂ ಗಗ್ಗರ ಸೇವೆ.

Coastal Bulletin
ಪಕ್ಕಳಪಾದೆ : ಶ್ರೀ ಸ್ವಾಮಿ ಕೊರಗಜ್ಜ ಪೀಠ ಮೇ.10ರಂದು ಕೊರಗ ತನಿಯ ದೈವದ ಶಿಲಾ ಪ್ರತಿಷ್ಠೆ, ನವಕ ಕಲಶಾಭಿಷೇಕ ಹಾಗೂ ಗಗ್ಗರ ಸೇವೆ.

ಬಂಟ್ವಾಳ :ಶ್ರೀ ಸ್ವಾಮಿ ಕೊರಗಜ್ಜ ಪೀಠ ಐನೂರಪಳಿಕೆ, ಸರಸ್ವತಿ ನಗರ, ಪಕ್ಕಳಪಾದೆ ಇಲ್ಲಿ ಕೊರಗ ತನಿಯ ದೈವದ ಶಿಲಾ ಪ್ರತಿಷ್ಠೆ, ನವಕ ಕಲಶಾಭಿಷೇಕ ಹಾಗೂ ಗಗ್ಗರ ಸೇವೆಯು ಮೇ.10ರಂದು ಆದಿತ್ಯವಾರ ನಡೆಯಲಿದೆ.

ಕಾರ್ಯಕ್ರಮಗಳ ವಿವರ :

ಮೇ.10ರಂದು ಬೆಳಿಗ್ಗೆ ಗಂಟೆ 8ರಿಂದ ಗಣಪತಿ ಹೋಮ, 9-45ರ ವೃಷಭ ಲಗ್ನ ಸುಮೂಹೂರ್ತದಲ್ಲಿ ಕೊರಗ ತನಿಯ ದೈವದ ಪ್ರತಿಷ್ಠೆ, ನವಕ ಕಲಶಾಭಿಷೇಕ, ಮಧ್ಯಾಹ್ನ  ಪ್ರಸಾದ ವಿತರಣೆ, ಅನ್ನ ಸಂತರ್ಪಣೆ

ಜರುಗಲಿದೆ.

ರಾತ್ರಿ 8-00ಕ್ಕೆ ಅನ್ನ ಸಂತರ್ಪಣೆ 9-30ಕ್ಕೆ  ಕೊರಗ ತನಿಯ ದೈವಕ್ಕೆ ಗಗ್ಗರ ಸೇವೆ ನಡೆಯಲಿದೆ.ಮೇ.11ರಂದು ಸೋಮವಾರ ರಾತ್ರಿ ಗಂಟೆ 8-00ಕ್ಕೆ ಕೊರಗ ತನಿಯ ದೈವಕ್ಕೆಅಗೇಲು ಸೇವೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Comment