ಲಕ್ಷಾಂತರ ರೂ ಮೌಲ್ಯದ ನಿಷೇದಿತ ಎಂ ಡಿ ಎಂ ಎ  ಸಹಿತ ಇಬ್ಬರು ಆರೋಪಿಗಳ ಬಂಧನ  

Coastal Bulletin
ಲಕ್ಷಾಂತರ ರೂ ಮೌಲ್ಯದ ನಿಷೇದಿತ ಎಂ ಡಿ ಎಂ ಎ  ಸಹಿತ ಇಬ್ಬರು ಆರೋಪಿಗಳ ಬಂಧನ  

ಬಂಟ್ವಾಳ: ಬೆಂಗಳೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ನಿಷೇದಿತ ಮಾದಕವಸ್ತು ಸರಬರಾಜು ಮಾಡುತ್ತಿದ್ದ ಡ್ರಗ್ಸ್ ಮಾಫಿಯಾವನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸುಮಾರು 46 ಲಕ್ಷ ರೂ ಮೌಲ್ಯದ ಎಂ ಡಿ ಎಂ ಎ ಮಾದಕವಸ್ತು ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೋಳಂತೂರು ಗ್ರಾಮದ ಎನ್.ಸಿ. ರೋಡ್‌ ನ ನಿಜಾಮುದ್ದಿನ್ (30)  ಹಾಗೂ ಮಹಮ್ಮದ್ ಶಾಹಿಂ (19)ಬಂಧಿತ ಆರೋಪಿಗಳು.

ಕಳೆದ ಕೆಲ ಸಮಯಗಳಿಂದ ಬೆಂಗಳೂರಿನಿಂದ ಬಂಟ್ವಾಳ ಮೂಲಕ ದ.ಕ. ಜಿಲ್ಲೆಗೆ ಮಾದಕವಸ್ತು ಸರಬರಾಜಾಗುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಇದರ ಬೆನ್ನತ್ತಿದ ಪೊಲೀಸರು ಬಲೆ ಬೀಸಿದ್ದರು.

ಬೆಂಗಳೂರಿನಿಂದ ಬೊಲೆರೋ ವಾಹನದಲ್ಲಿ ಮಾದಕವಸ್ತು ಸಾಗಾಟವಾಗುತ್ತಿರುವ ಖಚಿತ ಮಾಹಿತಿ ಮೇರೆಗೆ, ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರ ತಂಡ ಮಾರ್ನಬೈಲು ವಿನಿಂದ ಮಂಚಿ ಗ್ರಾಮದ ಪಂಜಾಲ ಕ್ರಾಸ್‌ ಎಂಬಲ್ಲಿಗೆ  ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ರೂ 46 ಲಕ್ಷ ಮೌಲ್ಯದ ಎಂ ಡಿ ಎಂ ಎ

ಮಾದಕವಸ್ತು ಸಾಗಾಟಕ್ಕೆ ಬಳಸಿದ ಬೊಲೆರೋ ವಾಹನ, ಮೊಬೈಲ್ ಫೋನ್ ಗಳನ್ನು ವಶಪಡಿಸಿದ್ದಾರೆ

ಸದ್ಯ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಅಪಾದಿತ ಮೊಹಮ್ಮದ್‌ ನಿಜಾಮುದ್ದೀನ್‌ ಮತ್ತು ಮೊಹಮದ್‌ ಶಾಹೀಂ ಎಂಬುವರು ಬೆಂಗಳೂರಿನಲ್ಲಿ ಅಪರಿಚಿತ ನೈಜೀರಿಯಾದ ವ್ಯಕ್ತಿಯೊಬ್ಬರಿಂದ ಎಂಡಿಎಂಎ ನ್ನು ಖರೀದಿಸಿ ಶೇಖರಿಸಿಟ್ಟು ಗಿರಾಕಿಗಳಿಗೆ ಮಾರಾಟ ಮಾಡಿ, ಲಾಭ ಗಳಿಸುವ ಉದ್ದೇಶದಿಂದ ಅಕ್ರಮವಾಗಿ ವಶದಲ್ಲಿಟ್ಟುಕೊಂಡಿರುವುದಾಗಿ ಬಾಯ್ಬಿಟ್ಟಿದ್ದಾರೆ , ಈ ಜಾಲದಲ್ಲಿ ಭಾಗಿಯಾಗಿರುವ ಮತ್ತಷ್ಟು ಯುವಕರು ಪೊಲೀಸರ ಬಲೆಗೆ ಬೀಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರ ಈ ದಿಟ್ಟ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

Leave a Comment