ಬಂಟ್ವಾಳ: ಇಲ್ಲಿನ ಬಿ.ಸಿ.ರೋಡಿನಲ್ಲಿ ಚಿಣ್ಣರಲೋಕ ಮೋಕೆದ ಕಲಾವಿದೆರ್ ಮತ್ತು ಚಿಣ್ಣರ ಲೋಕ ಸೇವಾ ಬಂಧು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ನಡೆಯಲಿರುವ ಐದು ದಿನಗಳ 'ಕರಾವಳಿ ಕಲೋತ್ಸವ' ಬಹು ಸಂಸ್ಕೃತಿ ಉತ್ಸವ ಮೆರವಣಿಗೆಗೆ ಬಿ.ಸಿ.ರೋಡು ಅನ್ನಪೂರ್ಣೇಶ್ವರಿ ದೇವಸ್ಥಾನ ಬಳಿ ತಹಶೀಲ್ದಾರ್ ಕೆ.ಮಂಜುನಾಥ್ ಸೋಮವಾರ ಸಂಜೆ ಚಾಲನೆ ನೀಡಿದರು. ಇದೇ ವೇಳೆ ಮಹಿಳೆಯರ 'ಸೀರೆ ನಡಿಗೆ' ಸ್ಪರ್ಧೆಗೆ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಎಸ್.ಗಟ್ಟಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಚೆಂಡೆ, ಕೊಂಬು, ಗೊಂಬೆ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ದಫ್ ನೃತ್ಯ ಗಮನ ಸೆಳೆಯಿತು.
ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್, ತುಳು ಸಾಹಿತ್ಯ ಸಂಭ್ರಮ ಅಧ್ಯಕ್ಷ ಬೇಬಿ ಕುಂದರ್, ಸ್ಥಾಪಕಾಧ್ಯಕ್ಷ ಮೋಹನದಾಸ ಕೊಟ್ಟಾರಿ, ಗೌರವಾಧ್ಯಕ್ಷ ಪಿ.ಜಯರಾಮ ರೈ, ಟ್ರಸ್ಟಿ ಟಿ.ತಾರನಾಥ ಕೊಟ್ಟಾರಿ, ಪ್ರಮುಖರಾದ ಶೋಭಾ ಶೆಟ್ಟಿ, ಶೈಲಜಾ ರಾಜೇಶ್ ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ಅಬ್ದುಲ್ ರಝಾಕ್ ಕುಕ್ಕಾಜೆ, ದೇವಪ್ಪ ಕುಲಾಲ್, ಉಮೇಶ್
ಕುಮಾರ್ ವೈ., ರವೀಂದ್ರ ಕುಕ್ಕಾಜೆ, ಲತೀಫ್ ನೇರಳಕಟ್ಟೆ, ರಾಮಕೃಷ್ಣ ರಾವ್, ತ್ಯಾಗಂ ಹರೇಕಳ, ಉಮೇಶ ನೆಲ್ಲಿಗುಡ್ಡೆ, ಪುರುಷೋತ್ತಮ ಸಾಲ್ಯಾನ್, ಮಾಧವ ಕರ್ಬೆಟ್ಟು , ಪ್ರಕಾಶ್ ಕೋಡಿಮಜಲು, ಪ್ರೇಮನಾಥ ಶೆಟ್ಟಿ, , ಪುರುಷೋತ್ತಮ ಕೊಟ್ಟಾರಿ, ಪರಮೇಶ್ವರ ಶಾರದಾನಗರ, ಶಶಿಧರ ಆಚಾರ್ಯ, ಆರ್.ನೋಣಯ್ಯ ಮತ್ತಿತರರು ಇದ್ದರು.














