ವಿಜಯಪುರ: ವಿಜಯಪುರದಲ್ಲಿ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಾರ್ವಜನಿಕರ ಎದುರಲ್ಲೇ ಮಂಗಳಮುಖಿ ರೂಪದ ಯುವತಿಯನ್ನು ಬೆತ್ತಲೆಗೊಳಿಸಿ ಮಂಗಳಮುಖಿಯರೇ ಥಳಿಸಿದ್ದಾರೆ. ಮಂಗಳಮುಖಿಯರ ದರ್ಪದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಮಂಗಳಮುಖಿ ಅಂತ ಹೇಳಿ ದುಡ್ಡು ಕೇಳುತ್ತಿದ್ದಳು ಎಂದು ಮಂಗಳಮುಖಿ ರೂಪದಲ್ಲಿರೋ ಯುವತಿಯನ್ನು ಥಳಿಸಿದ್ದಾರೆ. ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಯುವತಿಯನ್ನು ಓಡಿಸಿಕೊಂಡು ಬಂದ ಮಂಗಳಮುಖಿಯರಾದ ಲಲಿತ ಮಹಲ್ ಹಾಗೂ ಮಿಶ್ರ ಪೇಡಾ ಯುವತಿಯನ್ನು ಹಿಡಿದು ಮನಬಂದಂತೆ ಥಳಿಸಿದ್ದಾರೆ. ಯುವತಿಯ ಪ್ಯಾಂಟ್, ಶರ್ಟ್ ಬಿಚ್ಚಿ ಬೆತ್ತಲೆಗೊಳಿಸಿ ಹಿಗ್ಗಾಮುಗ್ಗಾ ಥಳಿಸಿರುವುದು ಮಾತ್ರವಲ್ಲ ಮರ್ಮಾಂಗಕ್ಕೆ ಒದ್ದು, ಕಾರದಪುಡಿ ಹಾಕಿ ಹಲ್ಲೆ ಮಾಡಿದ್ದಾರೆ.
ಸಾರ್ವಜನಿಕರ ಎದುರಲ್ಲೇ ಏಳೆಂಟು ಮಂಗಳಮುಖಿಯರು ಅಮಾನವೀಯ ಕೃತ್ಯ ಎಸಗಿದ್ದು, ಯುವತಿ ಅಂಗಲಾಚಿ ಬೇಡಿಕೊಂಡರೂ ಬಿಡದ ಮಂಗಳಮುಖಿಯರು ಬೆತ್ತಲೆಗೊಳಿಸಿ ಹಲ್ಲೆ ಮಾಡುತ್ತಿದ್ದರು. ಇಷ್ಟೆಲ್ಲ ಘಟನೆ ನಡೆದರೂ ಜನರು ನಿಂತು ನೋಡುತ್ತಿದ್ದರು. ಮಾತ್ರವಲ್ಲ ಬೆತ್ತಲೆಗೊಳಿಸಿ ಹಲ್ಲೆ ಮಾಡುವ ವಿಡಿಯೋವನ್ನು
ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದರು.
ಎಲ್ಲೆಂದರಲ್ಲಿ ಯುವತಿಗೆ ಒದ್ದು ಆಕೆಯನ್ನು ನಿತ್ರಾಣ ಮಾಡುವಂತೆ ಮಾಡಿದ ಮಂಗಳಮುಖಿಯರು ಬಳಿಕ ಸೀರೆ ಎತ್ತಿ ತಮ್ಮ ಮರ್ಮಾಂಗ ತೋರಿಸಿ ವಿಕೃತಿ ಮೆರೆದಿದ್ದಾರೆ. ಯುವತಿ ಮಂಗಳಮುಖಿ ಎಂದು ಹೇಳಿಕೊಂಡು ದುಡ್ಡು ಕೇಳುತ್ತಿದ್ದಳು ಎನ್ನಲಾಗಿದೆ.
















