ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘದ 46ನೇ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕೋತ್ಸವ.

Coastal Bulletin
ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘದ 46ನೇ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕೋತ್ಸವ.

ಬಿ ಸಿ ರೋಡ್ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ ೪೬ನೇ ವಾರ್ಷಿಕ ಮಹಾಸಭೆಯು ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ಅಧ್ಯಕ್ಷ ಬಿ. ರಮೇಶ್ ಸಾಲಿಯಾನ್ ಸಂಚಯಗಿರಿಯವರ ಅಧ್ಯಕ್ಷತೆಯಲ್ಲಿ ಜೂ31ರಂದು ಬೆಳಿಗ್ಗೆ ನಡೆಯಿತು.

ಮಧ್ಯಾಹ್ನ ನಂತರ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಗ್ರಾಹಕರ ಕಲ್ಯಾಣ ಪರಿಷತ್‌ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಎಂ. ಪಿ. ವರ್ಷ ಮೈಸೂರು, ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಮುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡರೀಕಾಕ್ಷ ಯು., ನಿವೃತ್ತ ಡೆಪ್ಯೂಟಿ ಬಿಎಸ್‌ಎಫ್ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ, ಕುಲಾಲ ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಯ್ಯ ಹನೈನಡೆ, ಬಂಟ್ವಾಳ ಕುಲಾಲ ಯುವವೇದಿಕೆ ಅಧ್ಯಕ್ಷ ಸುಮಿತ್ ಸೊರ್ನಾಡು, ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಕುಂಬಾರರ ಮಹಿಳಾ ಸಂಘದ ಅಧ್ಯಕ್ಷೆ ವಸಂತಿ ಭೋಜ ಸಾಲಿಯಾನ್ ಆಗಮಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಆಶಾಗಿರಿಧರ್, ಸೇವಾದಳಪತಿ ಜಯಂತ ಕುಲಾಲ್ ಅಗ್ರಬೈಲು ಉಪಸ್ಥಿತರಿದ್ದರು.

ಸಾಧಕರಿಗೆ ಗೌರವ ; ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ೪ನೇ ರ್‍ಯಾಂಕ್ ಪಡೆದ ಕು| ಜ್ಞಾನಶ್ರೀ ಅರಳ, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ೪ನೇ ರ್‍ಯಾಂಕ್ ತಂದ ಕು| ಮನ್ವಿತಾ, ಬಾಲಕಿಯರ ಡಿಸ್ಕಸ್ ತ್ರೋ ಆಟದಲ್ಲಿ ರಾಷ್ಟ್ರಮಟ್ಟದಲ್ಲಿ ೧೦ನೇ ಸ್ಥಾನ ಪಡೆದ ಕು| ಕೃತಿ ಎನ್.ಬಿ.ಪಿ., ಕರಾಟೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕು|

ಸಾನ್ವಿ ಕೆ.ರವರನ್ನು ಸನ್ಮಾನಿಸಲಾಯಿತು. ಡಾಕ್ಟರೇಟ್ ಪದವೀಧರೆ ಡಾ| ಬಬಿತಾಗಣೇಶ್, ಚಿತ್ರಕಲಾ ಕಲಾವಿದೆ ಸುಕನ್ಯಾ ಸೌತೆಬಳ್ಳಿ, ಟೇಬಲ್ ಟೆನ್ನಿಸ್‌ನಲ್ಲಿ ರಾಜ್ಯಮಟ್ಟದಲ್ಲಿ ೪ನೇ ಸ್ಥಾನ ಪಡೆದ ಸುಶ್ಮಿತಾ ಸೋಮನಾಥ್‌ರವರನ್ನು ಗೌರವಿಸಲಾಯಿತು. ಸಹಕಾರಿ ಇಲಾಖೆಯಲ್ಲಿ ಸ್ವಯಂನಿವೃತ್ತಿ ಪ್ರಥಮ ದರ್ಜೆ ಸಹಾಯಕರಾದ ಜಲಜಾಕ್ಷಿ ಕುಲಾಲ್ ಪಾಣೆಮಂಗಳೂರುರವರಿಗೆ ಅಮೂಲ್ಯ ರತ್ನ ಪ್ರಶಸ್ತಿ ನೀಡಲಾಯಿತು.

ಬೆಳಿಗ್ಗೆ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಪ್ರೇಮನಾಥ ನೇರಂಬೋಳು, ಕೃತಿಕ್ ಕುಮಾರ್ ವೈ.ಎಸ್., ವೈಷ್ಣವಿ ವೈ.ಕೆ. ಇವರಿಂದ ಗಾನ ಸಂಭ್ರಮ ಮತ್ತು ಸಂಜೆ ಕಟೀಲು ಮೇಳದ ಕಲಾವಿದ ಅಶ್ವಥ್ ಕುಲಾಲ್ ಮಂಜನಾಡಿ ಇವರ ನೇತೃತ್ವದಲ್ಲಿ ಕುಲಾಲ ಸಮಾಜ ಬಾಂಧವರಿಂದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ನಡೆಯಿತು.

ಡ್ಯಾನ್ಸ್ ಕೋರಿಯೋಗ್ರಾಫರ್ ಮಹೇಶ್ ಕುಲಾಲ್ ಕಡೇಶಿವಾಲಯ, ತಾರನಾಥ ಮೊಡಂಕಾಪು, ಹರಿಣಾಕ್ಷಿ ಮೊಡಂಕಾಪು, ರಾಜೇಶ್ ಕುಮಾರ್ ರಾಯಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಯಾದವ ಅಗ್ರಬೈಲು ಸ್ವಾಗತಿಸಿದರು. ಮಹಿಳಾ ಘಟಕದ ಸದಸ್ಯರು ಪ್ರಾರ್ಥಿಸಿದರು.

ಕಾರ್ಯಕ್ರಮಕ್ಕೆ ಮಚ್ಚೇಂದ್ರ ಸಾಲಿಯಾನ್, ದೇವದಾಸ ಅಗ್ರಬೈಲು, ರಾಘವೇಂದ್ರ ಕಾಮಾಜೆ, ಗಣೇಶ್ ಕುಲಾಲ್ ಬೆದ್ರಗುಡ್ಡೆ, ಮೀನಾಕ್ಷಿಪದ್ಮನಾಭ, ಸತೀಶ್ ಸಂಪಾಜೆ, ಯೋಗೀಶ್ ಮಿತ್ತಬೈಲು, ರಮೇಶ್ ಸಾಲಿಯಾನ್ ಕೈಕುಂಜೆ, ಜಯಂತ ಬಂಗೇರ ವಗ್ಗ, ಪ್ರೇಮ ಪೊಸಳ್ಳಿ ಕಾರ್ಯಕ್ರಮಕ್ಕೆ ಸಹಕರಿಸಿದ್ದರು.

Leave a Comment