Coastal Bulletin

ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ಜ್ಯೋತಿನಗರದ ಬಸ್ ನಿಲ್ದಾಣ ಎದುರು ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿ ಭಕ್ತ ವೃಂದದ ವತಿಯಿಂದ ಜ್ಯೋತಿ ನಗರದಲ್ಲಿ ತ್ರಿವಿಧ ದಾಸೋಹಿ ಹಾಗೂ ಪದ್ಮವಿಭೂಷಣ ಶ್ರೀ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ 115ನೇ ಜಯಂತಿಯ ಅಂಗವಾಗಿ ಸ್ವದೇಶಿ ಜಾಗೃತಿ ಕಾರ್ಯಕ್ರಮ ಮಾಡಿ, ಸಾರ್ವಜನಿಕರಿಗೆ ಎಳನೀರು ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮೂಡಾ ಸದಸ್ಯ ಹಾಗೂ ಬಿಜೆಪಿ ಮೈಸೂರು ನಗರ ಉಪಾಧ್ಯಕ್ಷ ಟಿ ರಮೇಶ್ ರವರು ಶಿವಕುಮಾರಸ್ವಾಮೀಜಿ ರವರು ಸೂರ್ಯನಂತೆ ಎಲ್ಲರ ಮನೆ, ಮನಸ್ಸು ಬೆಳಗುವ ಮಹಾನ್ ಚೇತನ. ಶ್ರೀಗಳು ನಮ್ಮೊಂದಿಗೆ ಇಂದಿಗೂ ಇದ್ದಾರೆ, ಮುಂದೆಯೂ ಇರುತ್ತಾರೆ ‘ಶಿವಕುಮಾರಸ್ವಾಮೀಜಿ ಅವರನ್ನು ಸ್ಮರಣೆ ಮಾಡುವುದರೊಂದಿಗೆ ಅವರ ದಾರಿಯಲ್ಲಿ ನಾವು ಸಾಗಬೇಕು, ಆಗ ಮಾತ್ರ ಅವರ ಸ್ಮರಣೋತ್ಸವ ಸಾರ್ಥಕವಾಗುತ್ತದೆ’ .ತ್ರಿವಿಧ ದಾಸೋಹಿಗಳಾದ ಡಾ.ಶಿವಕುಮಾರ ಸ್ವಾಮೀಜಿ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇದ್ದರೂ ಮಾನಸಿಕವಾಗಿ ನಮ್ಮೊಂದಿಗೆ ಇದ್ದಾರೆ. ಇಷ್ಟಲಿಂಗ ಪೂಜೆಯನ್ನು ಜಗತ್ತಿಗೆ ತೋರಿಸಿಕೊಟ್ಟವರು ಶಿವಕುಮಾರ ಸ್ವಾಮೀಜಿ. ಇಷ್ಟಲಿಂಗ ಪೂಜೆಯನ್ನು ಇಷ್ಟಪಟ್ಟು ಮಾಡುತ್ತಲೇ ತಮ್ಮ ಶಕ್ತಿ ಪಡೆದುಕೊಳ್ಳುತ್ತಿದ್ದರು’ ಎಂದರು.

ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ ಲೋಹಿತ್  ಮಾತನಾಡಿ  ‘ಶಿವಕುಮಾರ ಸ್ವಾಮೀಜಿಯ ಸ್ಮರಣೆಯೇ ನಮಗೆ ಬೆಳಕು. ಅವರು ಕರಗದೇ ಇರುವ ಮುತ್ತು. ತಮ್ಮ ಜೀವನವೇ ಸಂದೇಶ ಎಂಬಂತೆ ಬದುಕಿದ ಶ್ರೀಗಳು ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ’ ತುಮಕೂರು ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ,ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳು ಮಾಡಿದ ಕಾರ್ಯ ದೇಶಕ್ಕೆ ಮಾದರಿಯಾಗಿದೆ. ಭಾರತ ರತ್ನ

ನೀಡಿ ಗೌರವಿಸಿದರೆ ಪ್ರಶಸ್ತಿಗೆ ಗೌರವ ನೀಡಿದಂತಾಗುತ್ತದೆ. ಜಾತಿ,ಮತ, ಪಂಥ ,ಭಾಷೆ ,ಧರ್ಮ ಎನ್ನದೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ ನಾಡನ್ನು ಶ್ರೀಮಂತಗೊಳಿಸಿದ ಶ್ರೀಗಳಿಗೆ ತಕ್ಷಣವೇ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಬೇಕು. ಮತ್ತೊಬ್ಬ ಬಸವಣ್ಣ ಕಾಯಕಯೋಗಿ, ಸಾಮಾಜಿಕ ನ್ಯಾಯ ಹರಿಕಾರ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ನಮ್ಮ ಮಠದ ಕಾಯಕದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಕ್ಷೇತ್ರ ಸರ್ವತೋಮುಖವಾಗಿ ಬೆಳೆದು ಬಡವರಿಗೆ, ಅಶಕ್ತರಿಗೆ ಅನ್ನ, ವಿದ್ಯೆ ನೀಡಿ ಆಸರೆಯಾಗಲಿ ಎಂದು ಹರಿಸುತ್ತಿದ್ದರು. ಸಮಸ್ತ ಮಠಮಾನ್ಯಗಳಿಗೆ ಹಾಗೂ ಇಡೀ ಗುರುವೃಂದಕ್ಕೆ ತಿಲಕಪ್ರಾಯರಾಗಿದ್ದ ಪೂಜ್ಯರು ನಮ್ಮೆಲ್ಲರಿಗೂ ಮಾರ್ಗಜ್ಯೋತಿಯಾಗಿದ್ದರು ಎಂದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕಿ ರೇಣುಕಾ ರಾಜು, ಮೈಸೂರು ನಗರ ಕಾರ್ಯಕಾರಣಿ ಸದಸ್ಯರಾದ ಕೃಷ್ಣಮೂರ್ತಿ, ಹಾಗೂ  ಶಿವಾನಂದರಾವ್, ಶ್ರೀಕಂಠಮೂರ್ತಿ, ಮತ್ತು ಕ್ಷೇತ್ರದ ಉಪಾಧ್ಯಕ್ಷ ರಾದ ಸ್ವಾಮಿ, ಮೈಸೂರು ನಗರ ಹಿಂದುಳಿದ ವರ್ಗಗಳ ಮೋರ್ಚಾ ಜೀವನ, ಮುಖಂಡರಾದ ನಾಣಿ ಗೌಡ,  ನಾಗೇಂದ್ರ, ಭವಾನಿ, ಕ್ಷೇತ್ರದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಧನರಾಜ್, ಮತ್ತು ನವೀನ್ ಶೆಟ್ಟಿ, ರಾಜು, ಕಾರ್ಯಕರ್ತರಾದ ಚೇತನ್, ಶಾಮ್,  ಶ್ರೀನಿವಾಸ್,  ಮುಂತಾದವರು ಉಪಸ್ಥಿತರಿದ್ದರು.

Leave a Comment