ದೇಶಾದ್ಯಂತ ಜನೌಷಧಿ ಕೇಂದ್ರ ಪ್ರಾರಂಭವಾಗಿ ಇಂದಿಗೆ 5 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಕ್ಯಾತಮಾರನಹಳ್ಳಿ ಯಲ್ಲಿರುವ ಜನೌಷಧಿ ಕೇಂದ್ರ ರಲ್ಲಿ ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರ ಯುವ ಮೋರ್ಚಾ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಜನೌಷಧಿ ಕಿಟ್ ಗಳನ್ನು ಕೊಡುವ ಮುಖಾಂತರ ಸಾರ್ವಜನಿಕರಿಗೆ ಜನೌಷಧಿ ಬಗ್ಗೆ ಜಾಗೃತಿ ಮೂಡಿಸಿ ಅರ್ಥಪೂರ್ಣವಾಗಿ 5 ವರ್ಷದ ವಾರ್ಷಿಕೋತ್ಸವ ಆಚರಿಸಲಾಯಿತು.
ಪ್ರಧಾನಮಂತ್ರಿ ಜನ ಔಷಧಿ ಕೇಂದ್ರ ಬಡವರ ಆಶಾಕಿರಣ. ಬಡವರಿಗೆ ಕಡಿಮೆ ದರದಲ್ಲಿ ಔಷಧಿ ನೀಡಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಕನಸು ಎಂದು ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಲೋಹಿತ್ ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಔಷಧಿಗಳ ವ್ಯಾಪಾರೀಕರಣ ಹೆಚ್ಚಾಗಿದೆ. ಒಂದೊಂದು ಕಂಪನಿಯ ಒಂದೊಂದು ಔಷಧಿಗಳಿಂದಾಗಿ ಜನರಲ್ಲಿ ಗೊಂದಲ ಇದೆ. ಇದನ್ನು ಮನಗಂಡು ಪ್ರಧಾನಿ ಮೋದಿಯವರು ಜನ ಔಷಧಿ ಕೇಂದ್ರವನ್ನು ಜಾರಿಗೆ ತಂದಿದ್ದಾರೆ ಎಂದರು.
ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರದಲ್ಲಿ ಔಷಧಿಗಳು ಕಡಿಮೆ ದರದಲ್ಲಿ ಸಿಗುತ್ತಿವೆ.
ಇದು ಮಹತ್ವಾಕಾಂಕ್ಷಿ ಯೋಜನೆ. ಬರುವ ದಿನಗಳಲ್ಲಿ ಎಲ್ಲ ಕಡೆಗೂ ಜನ ಔಷಧಿ ಕೇಂದ್ರಗಳು ತೆರೆದರೆ ಬಡವರಿಗೆ ಅನುಕೂಲವಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಮೈಸೂರು ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಭರತ್, ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷರಾದ ಕಾರ್ತಿಕ್ ಮರಿಯಪ್ಪ, ಮೈಸೂರು ನಗರ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಣಿರತ್ನಂ, ಮೈಸೂರು ನಗರ ಕಾರ್ಯಕಾರಣಿ ಸದಸ್ಯರಾದ ಇಂದ್ರೇಶ್, ಎನ್ ಆರ್ ಕ್ಷೇತ್ರದ ಎಸ್ಟಿ ಮೋರ್ಚಾ ಕಾರ್ಯದರ್ಶಿ ಮೂರ್ತಿ, ಕ್ಷೇತ್ರದ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ಶೆಟ್ಟಿ ಹಾಗೂ ಧನರಾಜ್ ಹಾಗೂ ಸಂತೋಷ್ ಮುಂತಾದವರು ಉಪಸ್ಥಿತರಿದ್ದರು.














