Coastal Bulletin

ಬೆಂಗಳೂರು : ದಿನೇ ದಿನೇ ಹಿಂದೂ- ಮುಸ್ಲಿಂರ ನಡುವಿನ ಸಾಮರಸ್ಯ ಕದಡುತ್ತಲೆ ಇದೆ. ಇದೀಗ ಹಿಜಾಬ್ ವಿವಾದದ ಬಳಿಕ ಹಲಾಲ್ ಎಂಬ ಬಹಿಷ್ಕಾರ ಅಭಿಯಾನ ಆರಂಭವಾಗಿದೆ.

ಒಂದು ಜೀವಂತವಾದ ಕುರಿ, ಕೋಳಿಯನ್ನ, ಅಥವಾ ಪ್ರಾಣಿಯ ಕತ್ತು ಕುಯ್ದು ದೇಹದ ರಕ್ತವನ್ನೆಲ್ಲ ಹೊರಗೆ ಚೆಲ್ಲಿಸಿ ಕೊಲ್ಲುವಂತ ವಿಧಾನವೇ ಹಲಾಲ್. ಹಲಾಲ್ ಮಾಡುವವನು ಓರ್ವ ಮುಸ್ಲಿಂ ಆಗಿರಬೇಕು. ಈ ಹಲಾಲ್ ಪ್ರಮಾಣ ಪತ್ರವನ್ನ ನೀಡುವುದು ಜಮಿಯತ್ ಉಲಾಮ ಐ ಹಿಂದ್ ಹಲಾಲ್ ಟ್ರಸ್ಟ್. ಇದನ್ನ ಪಡೆಯಲು ಫೀಸ್ ಪಾವತಿ ಮಾಡಬೇಕಂತೆ. 30 ಸಾವಿರದಿಂದ 50 ಸಾವಿರದ ತನಕ ಹಣವನ್ನು ಹಲಾಲ್ ಸರ್ಟಿಫಿಕೇಟ್ ನೀಡಲು ಪಡೆಯಲಾಗುತ್ತದೆ.

ಯುಗಾದಿ ಯ ಮರುದಿನದಿಂದ ಮಾಂಸದ ಸೇವನೆ ಜಾಸ್ತಿಯಾಗುತ್ತದೆ. ಈ ಸಮಯದಲ್ಲಿ ಹಲಾಲ್

ಮಾಡಿದ ಮಾಂಸ ಖರೀದಿ ಮಾಡಬೇಡಿ ಎಂದು ಹಿಂದೂ ಜನಜಾಗೃತಿ ಸಮಿತಿ ಕರೆ ಕೊಟ್ಟಿದೆ. ಹಲಾಲ್ ಮಾಡಿದ ಮಾಂಸವನ್ನ ಅಲ್ಲಾನಿಗೆ ಅರ್ಪಣೆ ಮಾಡಿರುತ್ತಾರೆ.ಹಲಾಲ್ ಮಾಡುವಾಗ ಷರಿಯತ್ ನ ಆಯತ್ ಗಳನ್ನ ಹೇಳುತ್ತಾರೆ. ಹೀಗೆ ಹಲಾಲ್ ಮಾಡುವುದು ಅಲ್ಲಾನಿಗೆ ಅರ್ಪಣೆ ಮಾಡಿದಂತೆ  ಹೀಗಾಗಿ ಹಲಾಲ್ ಮಾಡಿದ ಮಾಂಸವನ್ನ ಖರೀದಿ ಮಾಡಬೇಡಿ ಎಂದು ಹಿಂದೂ ಜನಜಾಗೃತಿ ಸಮಿತಿ ಅಧ್ಯಕ್ಷ ಮೋಹನ್ ಗೌಡ ಕರೆ ನೀಡಿದ್ದಾರೆ. ಅಲ್ಲದೇ ಈ ಸರ್ಟಿಫಿಕೇಟ್ ನಿಂದ ಬರುವ ಹಣವನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿ ಆರೋಪಿಸುತ್ತಿದೆ.

Leave a Comment