ಬಂಟ್ವಾಳ :ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ತರಕೆರೆಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನವೋದಯ ಮಿತ್ರ ಕಲಾವೃಂದ (ರಿ)ಮತ್ತು ನೇತ್ರಾವತಿ ಮಾತೃಮಂಡಲಿ ಇದರ 35ನೇ ವರ್ಷದ ವಾರ್ಷಿಕೋತ್ಸವವು ಮೇ 7ರಂದು ನೆತ್ತರಕೆರೆ ಶಾಲಾ ಮೈದಾನದಲ್ಲಿ ನಡೆಯಲಿದೆ.
ಈ ಪ್ರಯುಕ್ತ ನೂತನ ವಾರ್ಷಿಕೋತ್ಸವ ಸಮಿತಿ ರಚನೆ ಯಾಗಿದ್ದು, ಅಧ್ಯಕ್ಷರಾಗಿ ಪ್ರಶಾಂತ್ ಕೆ, ಉಪಾಧ್ಯಕ್ಷ ಶೇಖರ್ ನೆತ್ತರಕೆರೆ ಮತ್ತು ಶ್ರೀಮತಿ ಜಯಂತಿ ರಾಜೇಶ್,ಕಾರ್ಯದರ್ಶಿ ಪುಷ್ಪರಾಜ್ ನೆತ್ತರಕೆರೆ,ಜೊತೆ ಕಾರ್ಯದರ್ಶಿ ಸದಾನಂದ
ನೆತ್ತರಕೆರೆ,ಕೋಶಾಧಿಕಾರಿ ಸಂತೋಷ್ ನೆತ್ತರಕೆರೆ,ಕ್ರೀಡಾ ಕಾರ್ಯದರ್ಶಿ ಸುಧಾಕರ್ ಕುಲಾಲ್ ನೆತ್ತರಕೆರೆ ಹಾಗೂ ಕು ಅಶ್ವಿತಾ, ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ಕ್ರೀಡೋತ್ಸವವು ಏಪ್ರಿಲ್ 17ರಂದು ನಡೆಯಲಿರುವುದು ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.














