ಆನೇಕಲ್: ಕಾಂಗ್ರೆಸ್ ಪುರಸಭಾ ಸದಸ್ಯನನ್ನು ನಡು ರಸ್ತೆಯಲ್ಲಿ ಬರ್ಬರವಾಗಿ ಕೊಲೆಗೈದ ಘಟನೆ ಆನೇಕಲ್ ಪಟ್ಟಣದ ಬಹದ್ದೂರ್ ಪುರ ಬಳಿ (ಬುಧವಾರ) ನಡೆದಿದೆ. ಆನೇಕಲ್ ಪುರಸಭಾ ಸದಸ್ಯ ರವಿ ಎಂಬಾತನೇ ಕೊಲೆಯಾದ ದುರ್ದೈವಿ.
ಹೊಂಚು ಹಾಕಿ ರವಿಯನ್ನ ಅಡ್ಡಗಟ್ಟಿ ಮಾರಕಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಹಂತಕರು ಎಸ್ಕೇಪ್ ಆಗಿದ್ದಾರೆ. ಯುವಕರು ಕಳೆದ 15 ದಿನದಿಂದ ಲಾಂಗ್ ಹಿಡಿದು ಓಡಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೇಕಲ್ ಆಸ್ಪತ್ರೆಯ ಶವಾಗಾರಕ್ಕೆ ಬೆಂಗಳೂರು ಗ್ರಾಮಾಂತರ ಅಡೀಷನಲ್ ಎಸ್.ಪಿ ಎ.ಎಸ್.ಪಿ.ನಾಗೇಶ್ ಭೇಟಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಗ್ರಾಮಾಂತರ ಎಸ್.ಪಿ.ಸಿ.ಕೆ ಬಾಬಾ ಅವರು, ರಾತ್ರಿ 8.30 ಸುಮಾರಿಗೆ
ವ್ಯಕ್ತಿ ಒಬ್ಬ ಬಂದಿದ್ದಾನೆ. ಹೊರ ಬಂದ ನಂತರ ಮೂವರು ಅಟ್ಯಾಕ್ ಮಾಡಿದ್ದಾರೆ. ಕೂಡಲೇ ರವಿಯನ್ನು ಆಸ್ಪತ್ರೆಗೆ ತರಲಾಗಿತ್ತು. ಆರೋಪಿಗಳು ಯಾರು ಎಂದು ಗೊತ್ತಾಗಿದೆ. ಎರಡು ತಂಡಗಳನ್ನು ರಚನೆ ಮಾಡಿದ್ದೇವೆ. ಸ್ವಲ್ಪ ದಿನದ ಹಿಂದೆ ಕಾರಿನ ಗ್ಲಾಸ್ ಹಾಗೂ ಮನೆಗೆ ಕಲ್ಲು ಹೊಡೆದಿದ್ರು. ಆ ಗ್ಯಾಂಗ್ ರವಿ ಜೊತೆಗೆ ಇದ್ರು..ಹೀಗಾಗಿ ರವಿಯನ್ನು ಕೊಲೆ ಮಾಡಿದ್ದಾರೆ ಎಂದು ಗೊತ್ತಾಗಿದೆ. ಇನ್ನು ಮುಂದೆ ಇಂತಹ ಸಮಾಜಘಾತುಕರ ವಿರುದ್ಧ ಕ್ರಮ ವಹಿಸುತ್ತೇವೆ ಎಂದು ಹೇಳಿದ್ದಾರೆ.















