ಬಿ.ಸಿ.ರೋಡ್: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯದ 25ನೇ ವಾರ್ಷಿಕ ಸಭೆ.

Coastal Bulletin
ಬಿ.ಸಿ.ರೋಡ್: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯದ 25ನೇ ವಾರ್ಷಿಕ ಸಭೆ.

ಬಂಟ್ವಾಳ :ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ ಮತ್ತು ಉಡುಪಿ ಜಿಲ್ಲೆ ಇದರ ಬಂಟ್ವಾಳ ವಲಯದ 25 ನೇ ವಾರ್ಷಿಕ ಸಭೆ ಕನ್ನಡ ಭವನ , ಬಿ.ಸಿ. ರೋಡ್ ಇಲ್ಲಿ ವಲಯದ ಅಧ್ಯಕ್ಷರಾದ ಕಿಶೋರ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿಲ್ಲಾಧ್ಯಕ್ಷರಾದ ಪದ್ಮಪ್ರಸಾದ್ ಜೈನ್ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಜಿಲ್ಲಾ ಸಂಚಾಲಕರು ಕರುಣಾಕರ ಕಾಣಂಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಬಂಟ್ವಾಳ್, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ್ ಎನ್. ಜಿಲ್ಲಾ ಉಪಾಧ್ಯಕ್ಷ ರಮೇಶ್ ಕಲಾಶ್ರೀ, ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಳ, SKP ವಿವಿದೋದ್ದೇಶ ಸ.ಸಂ.ನಿ. ಇದರ ನಿರ್ದೇಶಕ ಹರೀಶ್ ರಾವ್ ಹಾಗೂ ವಲಯದ ಗೌರವಾಧ್ಯಕ್ಷ ಹರೀಶ್ ಕುಂದರ್, ವಲಯದ ಪ್ರ. ಕಾರ್ಯದರ್ಶಿ ಪ್ರಶಾಂತ್ ಕಲ್ಲಡ್ಕ, ಕೋಶಾಧಿಕಾರಿ ವರುಣ್ ಕಲ್ಲಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗತ ವರ್ಷದ ವರಧಿಯನ್ನು ರವಿ ಕಲ್ಪನೆ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕಲ್ಲಡ್ಕ ವಾರ್ಷಿಕ ವರಧಿ ವಾಚಿಸಿದರು. ಕೋಶಾಧಿಕಾರಿ ವರುಣ್

ಕಲಡ್ಕ ವಾರ್ಷಿಕ ಜಮಾ ಖರ್ಚು ಮಂಡನೆ ಮಾಡಿದರು.

23-24 ನೇ ಸಾಲಿನ ಶೆಕ್ಷಣಿಕ ವರ್ಷದಲ್ಲಿ ಎಸ್. ಎಸ್. ಎಲ್. ಸಿ ಮತ್ತು ಪಿ.ಯು.ಸಿ ಯಲ್ಲಿ ಗರಿಷ್ಠ ಅಂಕ ಗಳಿಸಿದ ನಮ್ಮ ಸದಸ್ಯರ ಮಕ್ಕಳಿಗೆ ವಿದ್ಯಾನಿಧಿ ನೀಡಿ ಗೌರವಿಸಲಾಯಿತು.

ಬಂಟ್ವಾಳ ವಲಯದ ಹೆಚ್ಚಿನ ಸದಸ್ಯರು ಸಭೆಯಲ್ಲಿ ಹಾಜರಿ ಇದ್ದು ಸಭೆಯು ಯಶಸ್ವಿಯಾಗಿ ನಡೆಯುವುದಕ್ಕೆ ಸಹಕಾರಿಯಾಗಿರುತ್ತಾರೆ. ವಲಯದ ಅಧ್ಯಕ್ಷರು ಮಾತನಾಡಿ ಪ್ರಸ್ತುತ ವರ್ಷ ವಲಯವು ಬೆಳ್ಳಿಹಬ್ಬವನ್ನು ಆಚರಿಸಲಿದ್ದು, ಈ ಒಂದು ವರ್ಷದಲ್ಲಿ ಸದಸ್ಯರಿಗೋಸ್ಕರ ನಿಶ್ಚಿತ ಯೋಜನೆಯ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗುವುದು ಎಂದು ತಿಳಿಸಿದರು.

ಹರೀಶ್ ಕುಂದರ್ ಸ್ವಾಗತಿಸಿ, ಯೋಗೀಶ್ ಮೊಗರ್ನಾಡ್ ಧನ್ಯವಾದವಿತ್ತರು. ಕಾರ್ಯಕ್ರಮವನ್ನು ರಾಜೇಂದ್ರ ಬಿ.ಸಿ. ರೋಡ್ ಇವರು ನಿರೂಪಿಸಿದರು.

Leave a Comment