ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಅಶ್ರಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು, ಜ.ಕೆ.ಎಸ್. ಹೆಗ್ಡೆ ಚಾರಿಟೆಬಲ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ವಿತರಣೆ ಹಾಗೂ ಉಚಿತ ಎಕ್ಸ್ ರೇ ರೋಗ ನಿರ್ಣಯ ಶಿಬಿರ ಸೇವಾಂಜಲಿ ಸಭಾಗೃಹದಲ್ಲಿ ಜೂ. 2ರಂದು ಮಂಗಳವಾರ ನಡೆಯಿತು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮುಂದಿನ ತಲೆಮಾರಿಗೆ ಆರೋಗ್ಯಕರ ಪರಿಸರ ನಿರ್ಮಾಣವಾಗ ಬೇಕಾದರೆ ನಾವು ಇಂದು ಪ್ರತಿಯೊಬ್ಬರೂ ನಮ್ಮ ಮನೆಯ ಪರಿಸರದಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಸಂಕಲ್ಪ ಮಾಡಬೇಕಿದೆ, ಮನುಷ್ಯ ಪರಿಸರವನ್ನು ಹಾಳುಗೆಡುವುದರಿಂದ ಹವಾಮಾನ ವೈಪರಿತ್ಯಕ್ಕೆ ಕಾರಣವಾಗಿದೆ ಎಂದರು.
ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ,ಪರಿಸರ ಭಗವಂತ ನಮಗೆ ನೀಡಿದ ಅದ್ಬುತ ವರ, ನಮ್ಮ ಬದುಕಿಗೆ ಪರಿಸರವೇ ಪ್ರೇರಣೆ ,ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ,ಜ್ಞಾನ ಶಕ್ತಿ ಹಾಗೂ ಕ್ರಿಯಾ ಶಕ್ತಿ ಒಟ್ಟುಗೂಡಿದರೆ ಪರಿಸರವನ್ನು ಸಂರಕ್ಷಿಸಲು ಸುಲಭ ಸಾಧ್ಯ, ಪರಿಸರ ನಾಶ ಮಾಡುವುದೆಂದರೆ ನಮ್ಮ ಜೀವನಕ್ಕೆ ನಾವೇ
ಕೊಡಲಿ ಏಟು ಹಾಕಿದಂತೆ ಎಂದರು.
ಸೇವಾಂಜಲಿ ದಂತ ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರತೀಕ್ಷಾ ಕುಡ್ವ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು
ವೇದಿಕೆಯಲ್ಲಿ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಸಹಾಯಕ ಸೂಪರಿಂಟೆಂಡೆಂಟ್ ಡಾ. ಸಿರಾಲ್ ಹೆಗ್ಡೆ, ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯ ಡಾ. ಡಾ.ಚೇತನ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಅನಿಲ್ ಸನಿಲ್ ಪ್ರಮುಖರಾದ ದಿನೇಶ್ ತುಂಬೆ, ಪದ್ಮನಾಭ ಕಿದೆಬೆಟ್ಟು, ಪ್ರಶಾಂತ್ ತುಂಬೆ, ನಾರಾಯಣ ಬಡ್ದುರು , ಶೇಖರ್, ವಿಕ್ರಂ ಫರಂಗಿಪೇಟೆ, ಸುರೇಶ್ ಪೆಲಪಾಡಿ, ಉಮಾ ಚಂದ್ರ ಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು
ಇದೇ ಸಂದರ್ಭ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮದ ಅಂಗವಾಗಿ ಉಚಿತ ಎಕ್ಸ್ ರೇ ರೋಗ ನಿರ್ಣಯ ಶಿಬಿರ ನಡೆಯಿತು. ಸಾರ್ವಜನಿಕರಿಗೆ ವಿವಿಧ ತಳಿಯ ಸಸಿಗಳನ್ನು ವಿತರಿಸಲಾಯಿತು.















