ನೆತ್ತರಕೆರೆ :ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ.

Coastal Bulletin
ನೆತ್ತರಕೆರೆ :ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ.

ಬಂಟ್ವಾಳ :ದ ಕ ಜಿ ಪಂ ಹಿ ಪ್ರಾ ಶಾಲೆ, ಕಳ್ಳಿಗೆ ನೆತ್ತರಕೆರೆ ಇಲ್ಲಿ 2026-27ನೇ ಸಾಲಿನ ಶಾಲಾ ಪ್ರಾರಂಭೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಮೆರವಣಿಗೆಯ ಮೂಲಕ ಕರೆ ತಂದು ನೂತನವಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಆರತಿ ಬೆಳಗಿಸಿ ಪುಷ್ಪ ವೃಷ್ಟಿಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದ್ವಿಭಾಷಾ ಮಾಧ್ಯಮದ ಉದ್ಘಾಟನೆಯನ್ನು ಶಾಲಾ ಹಳಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಂಡಾಜೆಗುತ್ತು ಜ್ಯೋತಿಂದ್ರ ಶೆಟ್ಟಿ ಉದ್ಘಾಟಿಸಿದರು.

ಪ್ರಸಿದ್ಧ ವಾಗ್ಮಿ ದಾಮೋದರ ಶರ್ಮಾ ಮಾತೃ ವಂದನ ಕಾರ್ಯಕ್ರಮವನ್ನು ನಡೆಸಿಕೊಟ್ಟು, ಪೋಷಕರೊಂದಿಗೆ ಸಂವಾದ ನಡೆಸಿ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರು ಕೈಗೊಳ್ಳಬಹುದಾದ ಧನಾತ್ಮಕ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು.

ಇಲಾಖೆಯಿಂದ ಪೂರೈಕೆಯಾದ ಉಚಿತ ಪಠ್ಯಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪೊಳಲಿ ಶ್ರೀರಾಮಕೃಷ್ಣ ತಪೋವನದಿಂದ ನೀಡಲಾಗುವ ಉಚಿತ ನೋಟ್ ಪುಸ್ತಕಗಳನ್ನು ಪೊಳಲಿ ಶ್ರೀರಾಮಕೃಷ್ಣ ತಪೋವನದ ಶ್ರೀವಿವೇಕ ಚೈತನ್ಯಾನಂದ ಸ್ವಾಮೀಜಿ ವಿದ್ಯಾರ್ಥಿಗಳಿಗೆ ವಿತರಿಸಿ

ಶುಭವನ್ನು ಹಾರೈಸಿದರು.

ಪ್ರಮುಖರಾದ ಬಿ ಸುರೇಶ್ ಭಂಡಾರಿ ಅರ್ಬಿ, ಪಿ ಸುಬ್ರಹ್ಮಣ್ಯರಾವ್, ಜಗದೀಶ್ ಎನ್, ಶಾಲಾ ಮುಖ್ಯ ಶಿಕ್ಷಕಿ ಸಿಲ್ವಿಯ ಬ್ರೆಕ್ಸ್ ನಿವೃತ್ತ ಮುಖ್ಯ ಶಿಕ್ಷಕಿ ಗುಣರತ್ನ, ಸರಿತಾ ಮಹೇಶ್, ಕಳ್ಳಿಗೆ ಗ್ರಾಮ ಪಂಚಾಯತ್ ಪಿಡಿಓ  ಚಂದ್ರಾವತಿ, ಎಸ್ ಡಿ ಎಂ ಸಿ ಅಧ್ಯಕ್ಷ ದಾಮೋದರ ನೆತ್ತರಕೆರೆ, ಉಪಾಧ್ಯಕ್ಷೆ ಸೌಮ್ಯ ಜಗದೀಶ್ ಉಪಸ್ಥಿತರಿದ್ದರು.

ಶಿಕ್ಷಕಿ ಕೆಜೆ ಮರಿಯ ಸಲೀಂ ಸೆಲಿನ್ ಪ್ರಾರ್ಥಿಸಿ, ಮೋಹಿನಿ ನಿರೂಪಿಸಿ ಶಿಕ್ಷಕ ಅಭಿನಾಶ್ ಡ್ಯಾನಿಯಲ್ ಡಿಸೋಜಾ ವಂದಿಸಿದರು. ಶಾಲಾ ಶಿಕ್ಷಕರಾದ ಜಸಿಂತ ರೊಡ್ರಿಗಸ್ ಭಾನುಮತಿರಾಜೀವಿ, ಹನಮಂತಪ್ಪ ಗುತ್ತಲ, ಚೇತನ, ಆಶಿಕ, ನಿಶಾ ಹಾಗೂ ಮನಿಷಾ  ಸಹಕರಿಸಿದರು.

Leave a Comment