ಬಂಟ್ವಾಳ :ತುಂಬೆ ಗ್ರಾ ಪಂ ವ್ಯಾಪ್ತಿಯ ಕುಮ್ಡೇಲು ಕೊರಗಜ್ಜ ಕಟ್ಟೆಯಿಂದ ಹಳೇ ನೀರು ರಸ್ತೆಗೆ ಸ್ಥಳೀಯ ಶಾಸಕರಾದ ಯು ಟಿ ಖಾದರ್ ರವರ ಶಿಫಾರಸಿನ ಮೇರೆಗೆ ಗಣಿ ಹಾಗೂ ಭೂ ಇಲಾಖೆಯಿಂದ ಬಿಡುಗಡೆಯಾದ 5ಲಕ್ಷ ಅನುದಾನದ ರಸ್ತೆ ಕಾಂಕ್ರೀಟಿಕರಣಕ್ಕೆ ಮಾಜಿ ಜಿಲ್ಲಾ ಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ತುಂಬೆ ಗ್ರಾ ಪಂ ನಿಕಟ ಪೂರ್ವ ಉಪಾಧ್ಯಕ್ಷ ಗಣೇಶ್ ಸಾಲಿಯಾನ್ ತುಂಬೆ, ಮಾಜಿ ಅಧ್ಯಕ್ಷ ಪ್ರವೀಣ್ ಬಿ ತುಂಬೆ, ಪ್ರಮುಖರಾದ ಮೋನಪ್ಪ ಮಜಿ, ಪ್ರಕಾಶ್ ಬಿ ಶೆಟ್ಟಿ,
ದೇವದಾಸ ಪರ್ಲಕೆ, ಜಗದೀಶ ಗಟ್ಟಿ, ಅಶೋಕ್ ಕುಮಾರ್, ಅಶೋಕ್ ಕೊಟ್ಟಿಂಜ, ರಮೇಶ, ಹರೀಶ ರೊಟ್ಟಿಗುಡ್ಡೆ, ಗುತ್ತಿಗೆದಾರ ದಿನೇಶ್ ರೈ, ಉದಯ, ರಂಗಪ್ಪ ಪೂಜಾರಿ ವಸಂತಿ ಗಟ್ಟಿ, ಯುವರಾಜ್ ಮತ್ತಿತರರು ಉಪಸ್ಥಿತರಿದ್ದರು.















