Coastal Bulletin

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಹೈನುಗಾರರಿಗೆ ಸಹಕಾರ ಬ್ಯಾಂಕ್ ಸ್ಥಾಪನೆಗೆ ಸರ್ಕಾರ ಆದೇಶ ಹೊರಡಿಸಿದೆ. ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ರಚನೆ ಮಾಡಿ, ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ಒದಗಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ಸಾಲ ಸೌಲಭ್ಯದಲ್ಲಿ 1000 ರೂಪಾಯಿ ನೀಡಿ ಹೈನುಗಾರರು ಷೇರು ಪಡೆಯಬಹುದು. ಸರ್ಕಾರದಿಂದ ಬ್ಯಾಂಕಿಗೆ 100 ಕೋಟಿ ರೂಪಾಯಿ

ಬಂಡವಾಳ ನೀಡಲಾಗುತ್ತದೆ. ಹಾಲು ಒಕ್ಕೂಟಗಳಿಂದ 260 ಕೋಟಿ ರೂಪಾಯಿ ಬಂಡವಾಳ ತೊಡಗಿಸಲಾಗುತ್ತದೆ. ರಾಜ್ಯದ 24.67 ಲಕ್ಷ ಹಾಲು ಉತ್ಪಾದಕರಿಗೆ ಅನುಕೂಲವಾಗಲಿದೆ.

Leave a Comment