Coastal Bulletin

ಮೈಸೂರು : ವಿಜಯ ಸಂಕಲ್ಪ ಅಭಿಯಾನ 8000090009 - ಗೆ ಮಿಸ್ಡ್ ಕಾಲ್ ನೀಡುವುದರ ಮೂಲಕ ಬಿಜೆಪಿಯ ಸದಸ್ಯತ್ವ ಅಭಿಯಾನವನ್ನು ಬಿಜೆಪಿ ಮೈಸೂರು ನಗರ ಯುವ ಮೋರ್ಚಾ ಹಾಗು ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ಬನ್ನಿಮಂಟಪದಲ್ಲಿರುವ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸದಸ್ಯತ್ವ ಅಭಿಯಾನವನ್ನು ಮಾಡಿಸಿ ಪಕ್ಷದ ಯೋಜನೆ ಹಾಗೂ ಸಾಧನೆ ಮಾಡಿರುವ ಮಾಹಿತಿ ಕರಪತ್ರವನ್ನು ವಿತರಿಸಲಾಯಿತು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೈಸೂರು ನಗರ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಎಂ ಜೆ ಕಿರಣ್ ಗೌಡ ರಾಜ್ಯದ ಆದೇಶದ ಮೇರೆಗೆ ವಿಜಯ ಸಂಕಲ್ಪ ಅಭಿಯಾನ ಜನವರಿ 21ರಿಂದ 29 2023 ವರೆಗೆ ರಾಜ್ಯದ್ಯಂತ ಅಭಿಯಾನವನ್ನು ಬೂತ್ ಮಟ್ಟದಲ್ಲಿ ಆಯೋಜನೆ ಮಾಡಲಾಗಿದೆ, ಆದ್ದರಿಂದ ಇಂದು ನಮ್ಮ ಯುವ ಮೋರ್ಚಾ ತಂಡವು ನರಸಿಂಹರಾಜ ಕ್ಷೇತ್ರದಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳಲ್ಲಿ ಅವರ ಮೊಬೈಲ್ ಫೋನ್ ಗಳಲ್ಲಿ  ಮಿಸ್ಡ್ ಕಾಲ್ ಕೊಡುವ ಮುಖಾಂತರ ಸದಸ್ಯತ್ವವನ್ನಾಗಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ ವಿದ್ಯಾರ್ಥಿಗಳಲ್ಲಿ ಈಗಾಗಲೇ ಹೆಚ್ಚಿನ ಆಸಕ್ತಿ ಇದ್ದು  ಹಾಗೂ ಉತ್ಸಹಕರಾಗಿ ತಾವೇ ಯುವಕ ಯುವತಿಯರು  ಬಂದು

ಸದಸ್ಯರಾಗುವು ಮುಖಾಂತರ, ಅಭೂತಪೂರ್ವ  ಬೆಂಬಲವನ್ನು ಸೂಚಿಸಿದ್ದಾರೆ ಹಾಗು ತಮ್ಮ ಸ್ನೇಹಿತರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಯುವತಿಯರರು ತಮ್ಮ ಸ್ನೇಹಿತರನ್ನು ಸಹ ಬಿಜೆಪಿ ಸದಸ್ಯರನ್ನಾಗಿ ಮಾಡುವುದಾಗಿಯೂ ತಿಳಿಸಿದ್ದಾರೆ , ಇದೇ ರೀತಿ ಮೈಸೂರಿನ ನಾಲಕ್ಕು ಕ್ಷೇತ್ರಗಳಲ್ಲಿಯೂ ಸಹ ಅಭಿಯಾನವನ್ನು ಮಾಡಿ ಮೈಸೂರಿನ ಜಿಲ್ಲೆಯಲ್ಲಿ ಬಿಜೆಪಿ ಕಮಲ ಅರಳಿಸುವುದಾಗಿ ಸಂಘಟನೆಯನ್ನು ಮಾಡುತ್ತೇವೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷರಾದ ಡಿ ಲೋಹಿತ್, ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಭರತ್ ಹಾಗೂ ಸಂತೋಷ್ ಕುಮಾರ್ ಉಪಾಧ್ಯಕ್ಷರಾದ ಪುನೀತ್ ಕಾರ್ಯದರ್ಶಿಗಳಾದ ರಾಘವೇಂದ್ರ ಸ್ಥಳೀಯ ಮುಖಂಡರಾದ ಬನ್ನಿಮಂಟಪ ಮಹದೇವು ಹಾಗೂ ಕಾರ್ಯಕರ್ತರಾದ ಮನೋಜ್ ಅರುಣ್ ಹರೀಶ್ ಮುಂತಾದವರು ಉಪಸ್ಥಿತರಿದ್ದರು.

Leave a Comment