ರಾಜ್ ಕುಮಾರ್ ಸೇವಾ ಸಮಿತಿ ಮೈಸೂರು ಜಿಲ್ಲಾ ವತಿಯಿಂದ ಡಾ॥ ರಾಜ್ ಕುಮಾರ್ ರವರ93 ನೇ ಜನ್ಮದಿನದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಡಾ॥ ರಾಜ್ ಕರುನಾಡ ಕಣ್ಮಣಿ ಪ್ರಶಸ್ತಿ ವಿತರಿಸುವ ಕಾರ್ಯಕ್ರಮವನ್ನು ಮೈಸೂರು ದಸರ ವಸ್ತುಪ್ರದರ್ಶನ ಆವರಣದಲ್ಲಿ ಶನಿವಾರ ಬೆಳಿಗ್ಗೆ 9.30 ಗಂಟೆಗೆ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ, ಶ್ರೀ ಯಶಸ್ವಿನಿ ಸೋಮಶೇಖರ್ (ರಾಜಕೀಯ ಕ್ಷೇತ್ರ), ಶ್ರೀ ವಿ ಕುಮಾರಸ್ವಾಮಿ (ಸಮಾಜ ಸೇವಾ ಕ್ಷೇತ್ರ), ಶ್ರೀ ಎಂ ರವಿ ನಾಡನಹಳ್ಳಿ (ರಾಜಕೀಯ ಕ್ಷೇತ್ರ), ಶ್ರೀ ಜಯರಾಂ (ಸಂಗೀತ ಸೇವಾ ಕ್ಷೇತ್ರ), ಶ್ರೀ ಪ್ರಸನ್ನ ಕುಮಾರ್ (ಕನ್ನಡ ಸೇವಾ ಕ್ಷೇತ್ರ),ಶ್ರೀ ಜಯಸಿಂಹ (ಚಲನಚಿತ್ರ ಸೇವಾ ಕ್ಷೇತ್ರ), ಶ್ರೀ ತಿರುಮಲ ಯೋಗ ಪ್ರಕಾಶ್ (ಕ್ರೀಡಾ ಕ್ಷೇತ್ರ), ಶ್ರೀ ಮಹಾದೇವ ಸ್ವಾಮಿ (ಸಮಾಜ ಸೇವಾ ಕ್ಷೇತ್ರ), ಶ್ರೀರಾಜ್ ಮನೀಶ್ (ಕಲಾ ಕ್ಷೇತ್ರ), ಶ್ರೀ ಎಂ ರಮೇಶ್ (ಸಮಾಜ ಸೇವಾ ಕ್ಷೇತ್ರ) ಇವರಿಗೆ ಡಾ॥
ರಾಜ್ ಕರುನಾಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಶ್ರೀ ಹೇಮಂತ್ ಕುಮಾರ್ ಗೌಡ, ರಾಜ್ಯ ಪ್ರವಾಸೋದ್ಯಮ ನಿಗಮ ಮಂಡಳಿ ಅಧ್ಯಕ್ಷರಾದ ಕಾಪು ಸಿದ್ದಲಿಂಗಸ್ವಾಮಿ, ಮೈಸೂರು ಮಾಜಿ ಮಹಾಪೌರರಾದ ಶ್ರೀ ಸಂದೇಶ್ ಸ್ವಾಮಿ, ಬಿಜೆಪಿ ಮುಖಂಡರಾದ ರಘು ಕೌಟಿಲ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಲಕ್ಷ್ಮಿದೇವಿ, ಡಾಕ್ಟರ್ ರಾಜ್ ಕುಮಾರ್ ಸಂಘದ ಸಂಸ್ಥಾಪಕರಾದ ರಾಮೇಗೌಡರು, ಪರಮಪೂಜ್ಯ ವಂಗೀಪುರದ ಮಠದ ಪೂಜ್ಯರಾದ ಶ್ರೀ ಇಳಿಯ ಆಳ್ವಾರ್ ಸ್ವಾಮೀಜಿ, ಸಮಾಜ ಸೇವಕರಾದ ರಘುರಾಮ್ ವಾಜಪೇಯಿ, ಹಾಗೂ ಇನ್ನಿತರ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.














