ಕರ್ನಾಟಕ ಬಂದ್ ಗೆ ಹಲವು ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ

Coastal Bulletin
ಕರ್ನಾಟಕ ಬಂದ್ ಗೆ ಹಲವು ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ

ಕಳೆದ ತಿಂಗಳು ಮಹಾರಾಷ್ಟ್ರ ಮರಾಠಿ ಪುಂಡರು ಕನ್ನಡಿಗರ ಮೇಲೆ ನಡೆಸಿದ ಅಟ್ಟಹಾಸ, ದಬ್ಬಾಳಿಕೆಯನ್ನು ತೀವ್ರ ಖಂಡಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಇಂದು ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿದ್ದರು. ರಾಜ್ಯ ಬಂದ್‌ಗೆ ಹಲವು ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿದರೆ, ಇನ್ನೂ ಕೆಲವು ಸಂಘಟನೆಗಳು ಕೇವಲ ನೈತಿಕ ಬೆಂಬಲ ಮಾತ್ರ ನೀಡಿತ್ತು. ಕರುನಾಡನ್ನು ಸಂಪೂರ್ಣ ಸ್ತಬ್ದಗೊಳಿಸುವ ಮೂಲಕ ಪ್ರತಿಭಟನೆಯನ್ನು ಯಶಸ್ವಿ ಮಾಡಬೇಕು ಎಂದಿದ್ದ ವಾಟಾಳ್‌ ನಾಗರಾಜ್ ಬಂದ್ ಕರೆಗೆ ನೀರಸ ಪ್ರತಿಕ್ರಿಯೆ ಲಭಿಸಿದೆ.

ರಾಜ್ಯಾದ್ಯಂತ ಬಂದ್ ಕರೆಯಿದ್ದ ಕಾರಣ ಸಾರಿಗೆ ಬಸ್‌ಗಳು, ಆಟೋ, ಟ್ಯಾಕ್ಸಿಗಳು ಸಂಚಾರ ನಡೆಸಲಿದೆಯೇ ಎಂಬ ಅನುಮಾನಗಳು ಮೂಡಿತ್ತು. ಆದರೆ, ಇಂದು ಬೆಳಗ್ಗಿನಿಂದಲೇ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ರಸ್ತೆಗಿಳಿಯಿತು. ಇದರೊಟ್ಟಿಗೆ ಖಾಸಗಿ ಕಚೇರಿಗಳು, ಹೋಟೆಲ್‌, ಮಳಿಗೆಗಳು ಕೂಡ ಕಾರ್ಯನಿರ್ವಹಿಸಿವೆ. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ರಾಜ್ಯ ರಾಜಧಾನಿ ಹೊರತುಪಡಿಸಿದರೆ ಇನ್ನುಳಿದ ಜಿಲ್ಲೆಗಳಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ದೊರಕಿದೆ. ಈ ಮೂಲಕ ಕರ್ನಾಟಕ ಬಂದ್‌ಗೆ ಕೇವಲ ನೈತಿಕ ಬೆಂಬಲ ಮಾತ್ರ ಸಿಕ್ಕಿದೆ ಎಂಬುದು ಸ್ಪಷ್ಟ.

ಬಂದ್‌ಗೆ ಬೆಂಬಲ ಕೊಡದ ರಾಜ್ಯ ಸರ್ಕಾರ ನಡೆ ಮತ್ತು

ಪೊಲೀಸರ ವಿರುದ್ಧ ಕಿಡಿಕಾರಿದ ವಾಟಾಳ್ ನಾಗರಾಜ್ ಮತ್ತು ಕನ್ನಡ ಪರ ಸಂಘಟನೆಗಳು, ಬೆಂಗಳೂರಿನ ಟೌನ್‌ಹಾಲ್‌ ಮುಂದೆ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.ಬಂದ್ ಬೇಕಾಗಿರೋದು ಹೋಟೆಲ್​ ನಡೆಸುವವರಿಗಲ್ಲ, ಅದು ಕನ್ನಡಿಗರಿಗೆ ಬೇಕಾಗಿದೆ ಕರ್ನಾಟಕಕ್ಕೆ ಬೇಕಾಗಿದೆ, ಯಾರು ಹೇಳುತ್ತಾರೆ ಬೆಂಬಲ ಇಲ್ಲ ಅಂತ, ಸಾಮಾಜಿಕ ಜಾಲತಾಣಗಳಲ್ಲಿ ನೋಡಿ, ಕೋಟ್ಯಾಂತರ ಜನ ಬಂದ್ ಬೇಕು ಎಂದು ಹೇಳುತ್ತಿದ್ದಾರೆ, ನಾವು ಕನ್ನಡನಾಡಿಗಾಗಿ ಬಂದ್​ಗೆ ಕರೆ ನೀಡಿದ್ದೇವೆ ಹೇಳಿಕೆ ನೀಡಿದರು.

ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ರೂಪೇಶ್ ರಾಜಣ್ಣ, ಸಾ.ರಾ. ಗೋವಿಂದು ಸೇರಿದಂತೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Comment