Coastal Bulletin

ಕೇರಳ :ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಕೋವಿಡ್ ನಿರ್ಬಂಧಗಳಿಂದ ಮೂರು ದಿನಗಳವರೆಗೆ ವಿನಾಯಿತಿ ನೀಡಿರುವ ಕೇರಳ ಸರ್ಕಾರದ ಕ್ರಮವನ್ನು ಸುಪ್ರೀಂಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ

ಜುಲೈ 17ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜುಲೈ 21 ರಂದು ಬಕ್ರೀದ್ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ, ಜವಳಿ, ಪಾದರಕ್ಷೆಗಳ ಅಂಗಡಿಗಳು, ಆಭರಣಗಳು, ಅಲಂಕಾರಿಕ ಅಂಗಡಿಗಳು, ಗ.ಹೋಪಯೋಗಿ ವಸುಗಳನ್ನು ಮಾರಾಟ ಮಾಡುವ ಅಂಗಡಿಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು, ಎಲ್ಲಾ ರೀತಿಯ ದುರಸ್ತಿ ಅಂಗಡಿಗಳು ಮತ್ತು ಅಗತ್ಯ ವಸ್ತುಗಳ ಮಾರಾಟ ಮಾಡುವ ಅಂಗಡಿಗಳನ್ನು ಜುಲೈ 18 ಮತ್ತು 20ರಂದು ಬೆಳಗ್ಗೆ 7 ರಿಂದ ರಾತ್ರಿ 8

ರವರೆಗೆ ಎ, ಬಿ ಮತ್ತು ವಿಭಾಗಗಳಲ್ಲಿ ತೆರೆಯಲು ಅನುಮತಿಸಲಾಗುವುದು ಎಂದಿದ್ದರು.


ಲಾಕ್‌ಡೌನ್ ಮಾನದಂಡಗಳನ್ನು ಸಡಿಲಿಸಬೇಕು ಎಂಬ ವ್ಯಾಪಾರಿಗಳ ಬೇಡಿಕೆಗೆ ಕೇರಳ ಸರ್ಕಾರ ಮಣಿದಿರುವುದು ಆಘಾತಕಾರಿ ಸಂಗತಿ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

 

ಕೊರೋನಾ ಹೆಚ್ಚುತ್ತಿರುವ ಈ ಸಮಯದಲ್ಲಿ ಜನರ ಹಿತದೃಷ್ಟಿಯಿಂದ ಲಾಕ್​ಡೌನ್ ಸಡಿಲಿಕೆ ಆದೇಶವನ್ನು ರದ್ದು ಮಾಡುವಂತೆ ಕೇರಳ ಸರ್ಕಾರದ ಆದೇಶದ ವಿರುದ್ಧ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸುಪ್ರೀಂ ಕೋರ್ಟ್​​ಗೆ ಮೊರೆ ಹೋಗಿತ್ತು.

Leave a Comment