Coastal Bulletin

ಬೆಂಗಳೂರು : ಇದೇ ಮೊದಲ ಬಾರಿಗೆ ಆರಂಭಗೊಂಡ ಕನ್ನಡ ಬಿಗ್‌ ಬಾಸ್ ಒಟಿಟಿ ಅದ್ಧೂರಿಯಾಗಿ ತೆರೆಕಂಡಿದೆ. ಇಂದು ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ನಂಬರ್ ಅಂದರೆ ನಾನು ಎನ್ನುತ್ತಲೇ ಜನಪ್ರಿಯರಾದ ಗುರೂಜಿ ಆರ್ಯವರ್ಧನ್ 9ನೇ ಆವೃತ್ತಿ ಬಿಗ್ ಬಾಸ್ ಕನ್ನಡ ರಿಲಿಯಾಟಿ ಶೋಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ನೀಡಿದರು.

ಇನ್ನು ಕೋಸ್ಟಲ್‌ವುಡ್ ಸ್ಟಾರ್ ರೂಪೇಶ್ ಶೆಟ್ಟಿ ,ಸಾನ್ಯ ಅಯ್ಯರ್, ರಾಕೇಶ್ ಅಡಿಗ ಕೂಡ 9ನೇ ಆವೃತ್ತಿ ಬಿಗ್ ಬಾಸ್‌ಗೆ ಅವಕಾಶ ಪಡೆದಿದ್ದಾರೆ. ಆ ಪೈಕಿ ರೂಪೇಶ್​ ಶೆಟ್ಟಿ  ಅವರು ಟಾಪರ್​ ಆಗಿದ್ದಾರೆ. ಅವರಿಗೆ ಫಿನಾಲೆ ವೇದಿಕೆಯಲ್ಲಿ  5 ಲಕ್ಷ ರೂಪಾಯಿ ಬಹುಮಾನ  ನೀಡಲಾಯಿತು. ಕೊನೇ ವಾರದಲ್ಲಿ ವಿಶೇಷ ಟಾಸ್ಕ್​ಗಳನ್ನು ನೀಡಲಾಗಿತ್ತು. ಅವುಗಳಲ್ಲಿ ಬೆಸ್ಟ್​ ಪರ್ಫಾರ್ಮೆನ್ಸ್​ ನೀಡುವ ಮೂಲಕ ರೂಪೇಶ್​ ಶೆಟ್ಟಿ ಅವರು ಈ ಬಹುಮಾನದ ಮೊತ್ತ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ.

ಈ ಮೂಲಕ ಒಟಿಟಿಯಿಂದ ನಾಲ್ವರು ಸ್ಪರ್ಧಿಗಳು 9ನೇ ಆವೃತ್ತಿ ಬಾಗ್‌ ಬಾಸ್‌ಗೆ ಎಂಟ್ರಿಕೊಟ್ಟಿದ್ದಾರೆ. ಸೆಪ್ಟೆಂಬರ್ 24 ರಿಂದ 9ನೇ ಆವೃತ್ತಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಆರಂಭಗೊಳ್ಳುತ್ತಿದೆ. 

ಒಟಿಟಿ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಹಂತಕ್ಕೆ ಸೋಮಣ್ಮ ಮಾಚಿಮಾಡ, ರೂಪೇಶ್ ಶೆಟ್ಟಿ, ಆರ್ಯವರ್ಧನ್, ರಾಕೇಶ್ ಅಡಿಗ, ಸೋನು ಗೌಡ, ಸಾನ್ಯ ಅಯ್ಯರ್, ಜಶ್ವಂತ್ ಬೋಪಣ್ಣ

ಹಾಗೂ ಜಯಶ್ರಿ ಆಯ್ಕೆಯಾಗಿದ್ದರು. 8 ಸ್ಪರ್ಧಿಗಳ ಪೈಕಿ ನಾಲ್ವರು 9ನೇ ಆವೃತ್ತಿಗೆ ಬಡ್ತಿ ಪಡೆದಿದ್ದಾರೆ. 

ಗ್ರ್ಯಾಂಡ್ ಫಿನಾಲೆಗೆ ಬಂದು ಎಲಿಮಿನೇಟ್
ಒಟಿಟಿ ಫಿನಾಲೆಯಲ್ಲಿ ಮೊದಲಿಗೆ ಜಶ್ವಂತ್ ಬೋಪಣ್ಣ ಹಾಗೂ ಜಯಶ್ರಿ ಎಲಿಮಿನೇಟ್ ಆದರು. ಮೂರನೇ ಸರದಿ ಸುದ್ದಿ ವಾಹಿನಿ ನಿರೂಪಕ ಸೋಮಣ್ಣ ಮಾಚಿಮಾಡ . ಇನ್ನೂ ಸೋನು ಗೌಡ ಕೂಡ ಎಲಿಮಿನೇಟ್ ಆಗಿದ್ದಾರೆ. 

ಬಿಗ್‌ಬಾಸ್ ಒಟಿಟಿಯ ಶೋನಲ್ಲಿ ಒಟ್ಟು 16 ಸ್ಪರ್ಧಿಗಳು ಪ್ರವೇಶ ಪಡೆದಿದ್ದರು. ಟಿಕ್ ಟಾಕ್ ಸುಂದರಿ ಸೋನು ಶ್ರೀನಿವಾಸ್ ಗೌಡ, ಕನ್ನಡ ಕಿರುತೆರೆಯಲ್ಲಿ ಮಿಂಚಿರುವ ಸಾನ್ಯಾ ಅಯ್ಯರ್, ಸಂಖ್ಯಾಶಾಸ್ತ್ರ ಖ್ಯಾತಿಯ ಆರ್ಯವರ್ಧನ್, ಪತ್ರಕರ್ತ ಸೋಮಣ್ಣ ಮಾಚಿವಾಡ, ರೂಪೇಶ್ ಶೆಟ್ಟಿ, ರಾಕೇಶ್, ಜಯಶ್ರೀ ಆರಾಧ್ಯ, ಪ್ರೇಮಿಗಳಾಗಿರುವ ಜಶ್ವಂತ್ ಬೋಪಣ್ಣ ಫಿನಾಲೆಗೆ ಎಂಟ್ರಿಕೊಟ್ಟಿದ್ದರು. ಇದರಲ್ಲಿ ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ಸಾನ್ಯ ಅಯ್ಯರ್ , ರಾಕೇಶ್ ಅಡಿಗ ಫೈನಲಿಸ್ಟ್ ಆಗೋ ಮೂಲಕ 9ನೇ ಆವೃತ್ತಿ ಬಿಗ್ ಬಾಸ್‌ಗೆ ಎಂಟ್ರಿ ಟಿಕೆಟ್ ಪಡೆದಿದ್ದಾರೆ. 

Leave a Comment