ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಸೆ.15ರಂದು ಗುರುವಾರ ಸಂಜೆ ಸಂಗೀತ ರಸಮಂಜರಿ ಏರ್ಪಡಿಸುವುದರೊಂದಿಗೆ ಸೆ.9ರಂದು ಆರಂಭಗೊಂಡಿದ್ದ ಜೇಸಿ ಸಪ್ತಾಹ 2022ಕ್ಕೆ ತೆರೆ ಬಿದ್ದಿದೆ.
ಅಧ್ಯಕ್ಷ ಹರಿಪ್ರಸಾದ್ ಕುಲಾಲ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನಿರ್ದೇಶಕಿ ಗಾಯತ್ರಿ ಲೋಕೇಶ್, ಕಾರ್ಯದರ್ಶಿ ಕಿಶನ್ ರಾವ್, ಪೂರ್ವಾಧ್ಯಕ್ಷರಾದ ರಾಮಚಂದ್ರ ರಾವ್, ಅಹಮದ್ ಮುಸ್ತಫಾ, ಮಹಮ್ಮದ್, ಸತ್ಯನಾರಾಯಣ ರಾವ್, ರಾಘವೇಂದ್ರ ಹೊಳ್ಳ, ಹರ್ಷರಾಜ್, ವಸಂತ್, ಶ್ರೀನಿಧಿ ಭಟ್, ಕೃಷ್ಣರಾಜ ಭಟ್, ಜಯಾನಂದ ಪೆರಾಜೆ, ನಿಕಟಪೂರ್ವ ಅಧ್ಯಕ್ಷೆ ಶೈಲಜಾ ರಾಜೇಶ್ ಸಹಿತ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ವೇಳೆ ಜೇಸಿ ಸಪ್ತಾಹದಂಗವಾಗಿ ನೀಡುವ 2022ರ ಜೇಸಿ ಕಮಲಪತ್ರವನ್ನು ಪೂರ್ವಾಧ್ಯಕ್ಷ ಹರ್ಷರಾಜ್ ಅವರಿಗೆ ನೀಡಿ ಗೌರವಿಸಲಾಯಿತು. ಜೇಸಿ ಸದಸ್ಯ
ಹರೀಶ ಮಾಂಬಾಡಿ, ಕೋಸ್ಟಲ್ ಬುಲೆಟಿನ್ ವೆಬ್ ನ್ಯೂಸ್ ಸಂಪಾದಕ ಸಂತೋಷ್ ಕುಲಾಲ್ ನೆತ್ತರಕೆರೆ ಅವರನ್ನು ಸನ್ಮಾನಿಸಲಾಯಿತು.
ಮಿಥುನ್ ರಾಜ್ ವಿದ್ಯಾಪುರ ಅವರ ಶ್ರೀರಾಜ್ ಮ್ಯೂಸಿಕಲ್ ವರ್ಲ್ಡ್ ಅವರಿಂದ ಜೋಡುಮಾರ್ಗ ಮ್ಯೂಸಿಕಲ್ ನೈಟ್ ನಲ್ಲಿ ಕನ್ನಡ ಮತ್ತು ತುಳು ಹಾಡುಗಳನ್ನು ಮಹಿಮಾ ಮಂಗಳೂರು, ಮಿಥುನ್ ರಾಜ್ ವಿದ್ಯಾಪುರ, ಚೈತ್ರಾ ಕಡಂಬಾರ್, ದಿನೇಶ್ ಕರೋಪಾಡಿ ಹಾಡಿದರು. ಕೀಬೋರ್ಡ್ ನಲ್ಲಿ ಬಾಬಣ್ಣ ಪುತ್ತೂರು ಮತ್ತು ರಿದಂ ಪ್ಯಾಡ್ ನಲ್ಲಿ ರವಿಕಾಂತ್ ಕಾಸರಗೋಡು ಸಹಕರಿಸಿದರು. ಮಂಜು ರೈ ಮುಳೂರು ಕಾರ್ಯಕ್ರಮ ನಿರ್ವಹಿಸಿದರು.















