ಬಿಲ್ಲವ ಭವನದಲ್ಲಿ ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಪ್ರಯುಕ್ತ ಸಮಾಜದ ಮಾಜಿ ಯೋಧರಾದ ಶ್ರೀ ಬಿ.ಕೆ.ಈರಪ್ಪರವರಿಂದ ಧ್ವಜಾರೋಹಣ ನೆರವೇರಿಸಿ ಗಿಡ ನೆಡುವ ಮೂಲಕವಾಗಿ ಅದ್ದೂರಿಯಾಗಿ ಆಚರಿಸಲಾಯಿತು.
ಬಿಲ್ಲವ ಭವನದಿಂದ ನೋಬೊನಗರದಲ್ಲಿ ನೂತನವಾಗಿ ನಿರ್ಮಿಸಿದ ಬ್ರಹ್ಮಶ್ರೀ ನಾರಾಯಣ ಗುರು ವಿದ್ಯಾರ್ಥಿನಿ ನಿಲಯದವರೆಗೆ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಮಂತ್ರಿತರು,
ಸಲಹಾ ಸಮಿತಿ, ಸೇವಾದಳ, ಮಹಿಳಾಘಟಕ, ಸ್ಪಾರ್ಕ್, ಪೂಜಾ ಸಮಿತಿ ಹಾಗೂ ವಿವಿಧ ಅಧ್ಯಕ್ಷರುಗಳು ಹಾಗೂ ಸದಸ್ಯರಿಂದ ಮೆರವಣಿಗೆ ಮೂಲಕ ಕಾಲ್ನಡಿಗೆಯಲ್ಲಿ ತಲುಪಲಾಯಿತು.















