ಬೆಂಗಳೂರು: ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ರಾಜ್ಯದ 75 ಕಡೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಮೂರು ಸ್ಥಳಗಳು ಸೇರಿ ರಾಜ್ಯದ 75 ಕಡೆಯಲ್ಲಿ 200 ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.
ಗದಗ ಉಪ ತಹಶೀಲ್ದಾರ್ ಬಿ.ಎಸ್.ಅಣ್ಣಿಗೇರಿ ಮನೆ, ಅಳಿಯನ ಮನೆ ಮತ್ತು ಕಚೇರಿಯನ್ನು ಪರಿಶೀಲನೆ ಮಾಡಿದ್ದಾರೆ. ವಿಜಯಪುರದ ನಿರ್ಮಿತಿ
ಕೇಂದ್ರದ ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ನಿರ್ಮಿತಿ ಕೇಂದ್ರದ ಅಕೌಂಟೆಂಟ್ ಮಲ್ಲಮ್ಮ ರ ನಿವಾಸ ಮತ್ತು ಕಚೇರಿಯಲ್ಲಿ ದಾಳಿ ನಡೆಸಿದ್ದಾರೆ.














