Coastal Bulletin

ಕಳೆದ ವಾರದಿಂದ ಚಿನ್ನ ದ ಬೆಲೆ ಏರುತ್ತಲೇ ಇದೆ. ಆದರೆ ಇವತ್ತು ಚಿನ್ನ ದ ಬೆಲೆ ಬೆಂಗಳೂರಿನಲ್ಲಿ ಇಳಿಕೆ ಕಂಡಿದೆ.  ದೇಶದಲ್ಲಿಂದು ಚಿನ್ನದ ಬೆಲೆ ಏರಿಕೆಯಾಗಿದರೂ, ಬೆಂಗಳೂರಿನಲ್ಲಿ ಇಂದು ಬಂಗಾರದ ಬೆಲೆ ಇಳಿಕೆ ಕಂಡಿದೆ.

ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,250 ರೂ. ಇತ್ತು. ಇಂದು 10 ರೂ. ಏರಿಕೆಯಾಗಿದ್ದು 47,260 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,250 ರೂ. ಇತ್ತು. ಇಂದು 10 ರೂ. ಹೆಚ್ಚಳವಾಗಿದ್ದು, 49,260 ರೂ. ಆಗಿದೆ.

ಇನ್ನು ಬೇರೆ ಬೇರೆ ನಗರದಲ್ಲಿರುವ ಚಿನ್ನದ ಬೆಲೆ

ಇನ್ನು,

ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 49 ಸಾವಿರದ ಆಸುಪಾಸಿನಲ್ಲೇ ಇದೆ. ಚೆನ್ನೈನಲ್ಲಿ 49,230 ರೂ. ಇದ್ದರೆ, ಮುಂಬೈನಲ್ಲಿ 49,260 ರೂ., ದೆಹಲಿಯಲ್ಲಿ 51,330 ರೂ. ಹಾಗೂ ಕೋಲ್ಕತ್ತದಲ್ಲಿ 49,800 ರೂ. ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಶಿಕ್‌ನಲ್ಲೂ ಹೆಚ್ಚೂ ಕಡಿಮೆ 49 ಸಾವಿರದ ಆಸುಪಾಸಿನಲ್ಲೇ ಇದೆ.

Leave a Comment