ಭಜನೆ, ಭೋಜನ ನಾವು ಕುಟುಂಬಸ್ಥರು ಒಟ್ಟಾಗಿ ಮಾಡಿದಾಗ ಆ ಮನೆ ದೇವಾಲಯವಾಗಿ ನಿರ್ಮಾಣವಾಗುವುದು. ಅನ್ನಬ್ರಹ್ಮನನ್ನು ಸ್ವೀಕರಿಸುವ ಮುನ್ನ ಭಗವಂತನ ಸ್ಮರಿಸಿ ಭಕ್ತಿಯಿಂದ ಪ್ರಸಾದ ರೂಪದಲ್ಲಿ ಸ್ವೀಕರಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ರಾಷ್ಟ್ರೀಯ ಕುಟುಂಬ ಪ್ರಭೋದನ್ ಪ್ರಮುಖ್ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ನುಡಿದರು.
ಅವರು ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ಕುಟುಂಬ ಸಮಾವೇಶದಲ್ಲಿ ಉಪನ್ಯಾಸ ನೆರವೇರಿಸಿದರು.
ನಮ್ಮ ಮಾತೃಭಾಷೆಯನ್ನೇ ನಾವು ಮರೆಯುವ ಕಾಲಘಟ್ಟದಲ್ಲಿ ನಾವಿದ್ದೇವೆ. ನಮ್ಮ ಉಡುಗೆ
ತೊಡುಗೆಗಳು ವಿದೇಶಿ ಸಂಸ್ಕೃತಿಗಳನ್ನು ಬಿಂಬಿಸುತ್ತಿವೆ ಎಂದು ಖೇದ ವ್ಯಕ್ತಪಡಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಪುತ್ತೂರು ಜಿಲ್ಲಾ ಸಂಘಚಾಲಕ್ ಶ್ರೀ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ಶ್ರೀ ನವೀನ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.















