ಧಾರವಾಡ: ನಾಡೋಜ ಚೆನ್ನವೀರ ಕಣವಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಚಿಕಿತ್ಸೆ ಫಲಕಾರಿಯಾಗದೆ ಇಂದು ವಿಧಿವಶರಾಗಿದ್ದಾರೆ.
ಕನ್ನಡದ ಸಮನ್ವಯ ಕವಿ ಮತ್ತು ಸುನೀತಗಳ ಸಾಮ್ರಾಟ್ ಎಂದು ಜನಪ್ರಿಯರಾಗಿದ್ದ ಇವರಿಗೆ 93 ವಯಸ್ಸಾಗಿತ್ತು .
15 ಕ್ಕಿಂತ ಹೆಚ್ಚು ಕವನಗಳನ್ನು ಬರೆದ ಇವರಿಗೆ
ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ ,ಬಸವ ಗುರು ಕಾರುಣ್ಯ ಪ್ರಶಸ್ತಿ, ನಾಡೋಜ ಪ್ರಶಸ್ತಿ, 2020 ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಲಭಿಸಿದೆ.














