Coastal Bulletin

ತುಮಕೂರು:ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದಂದೇ ದುರಂತ ಘಟನೆಯೊಂದು ನಡೆದಿದ್ದು, ಶಾಲೆಯಲ್ಲಿ ಧ್ವಜಸ್ತಂಭ ನಿಲ್ಲಿಸುವ ವೇಳೆ ಮೂವರು ವಿಧ್ಯಾರ್ಥಿಗಳಿಗೆ ವಿದ್ಯುತ್ ಶಾಕ್ ತಗುಲಿ ಓರ್ವ ಮೃತಪಟ್ಟ ದುರಂತ ಘಟನೆ ಇಲ್ಲಿನ ಕೋರಾ ಹೋಬಳಿಯ ಕರೀಕೆರೆಯಲ್ಲಿ ನಡೆದಿದೆ.

ಶಶಾಂಕ್ ( 16), ಪವನ್ (22),ವಿದ್ಯುತ ಶಾರ್ಟ್ ಸರ್ಕ್ಯೂಟ್ ನಿಂದ ಗಾಯಗೊಂಡಿದ್ದು, ಚಂದನ್(16) ಮೃತಪಟ್ಟ ದುರ್ದೈವಿ ಬಾಲಕ. ಗಾಯಗೊಂಡವರನ್ನು ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸರ್ಕಾರಿ ಶಾಲೆಯಲ್ಲಿ ಧ್ವಜಸ್ತಂಭ ನಿಲ್ಲಿಸುತ್ತಿದ್ದ ವೇಳೆ ವಿದ್ಯುತ್ ತಂತಿಗೆ ತಗುಲಿ ಮೂವರಿಗೆ ಶಾರ್ಟ್ ಸರ್ಕ್ಯೂಟ್ ಆಗಿದೆ.ಮೂವರು ಕರಿಕೆರೆ

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು. ಇಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಶಾಲೆಗೆ ಧ್ವಜಸ್ತಂಭ ನಿಲ್ಲಿಸಲು ತೆರಳಿದ್ದರು. ಶಿಕ್ಷಕರ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಅಂತ ಪೋಷಕರು ಆರೋಪಿಸಿದ್ದಾರೆ.ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Comment